ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಡೆಪ್ಯುಟಿ ಜನರಲ್ ಮೆನೇಜರ್ ಹುದ್ದೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಥಮ ಬಾರಿಗೆ ಚೊಕ್ಕಾಡಿ ಸಮೀಪದ ಪೋನಡ್ಕ ಮನೆಯ ಪಿ. ಪಿ. ವಸಂತ ಕುಮಾರರವರು ಇತ್ತೀಚೆಗೆ ಪದೋನ್ನತಿಯನ್ನು ಹೊಂದಿರುತ್ತಾರೆ.
ಶೈಕ್ಷಣಿಕ ದಿನಗಳಿಂದಲೂ ಇವರು ಯಕ್ಷಗಾನ, ನಾಟಕ, ರಂಗ ತರಬೇತಿ, ಪ್ರಥಮ ಚಿಕಿತ್ಸಾ ತರಬೇತಿಯನ್ನು ಪಡೆದಿದ್ದು, ಫಿಲೆಟೆಲಿ, ಚೆಸ್, ಹವ್ಯಾಸಿ ಛಾಯಾಗ್ರಹಣ, ಹನಿಗವನ – ಸಣ್ಣಕಥೆಗಳ ರಚನೆ, ಟ್ರೆಕ್ಕಿಂಗ್, ಕೃಷಿ ಚಟುವಟಿಕೆಗಳು, ರಕ್ತದಾನ ಶಿಬಿರ, ಜೇನುಸಾಕಣೆ, ಪುಷ್ಪೋದ್ಯಮ, ಅತಿಥಿ ಉಪನ್ಯಾಸ, ಕನ್ನಡ ಸಾಹಿತ್ಯ ಪರಿಷತ್ತಿನ ಚುಟುವಟಿಕೆಗಳು, ಸಮಾಜ ಸೇವೆಯೇ ಮುಂತಾದ ಹಲವಾರು ಚಟುವಟಿಕೆಗಳಲ್ಲಿ ಬಿಡುವಿಲ್ಲದೆ ಕ್ರಿಯಾಶೀಲರಾಗಿದ್ದಾರೆ.
ಪೋನಡ್ಕ ದಿ. ಪರಮೇಶ್ವರಯ್ಯ ಹಾಗೂ ದಿ. ಸಾವಿತ್ರಿಯವರ ಪುತ್ರ.
ರಾಷ್ಟ್ರೀಯ ಬ್ಯಾಂಕಿಂಗ್ ಸಂಸ್ಥೆಯು ನಡೆಸುವ ಪರೀಕ್ಷೆ, ರಾಷ್ಟ್ರೀಯ ಗ್ರಾಮೀಣ ಬ್ಯಾಂಕಿಂಗ್ ಸಂಸ್ಥೆಯು ನಡೆಸುವ ಅಡ್ವಾನ್ಸ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಪ್ರಶಂಸಾ ಶ್ರೇಣಿಗಳನ್ನು ಪಡೆದು, ಉತ್ತೀರ್ಣರಾಗಿರುತ್ತಾರೆ.
ಪ್ರಸ್ತುತ, ಬೆಂಗಳೂರಿನ ಬಸವೇಶ್ವರನಗರದ ಶಾಖೆಯಲ್ಲಿ ಉಪ ಪ್ರಧಾನ ವ್ಯವಸ್ಥಾಪಕರಾಗಿ ಕಳೆದ ೩೧ ವರ್ಷಗಳಿಂದ ಬ್ಯಾಂಕಿನಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.