ಸಾರ್ವಜನಿಕ ಸ್ಥಳದಲ್ಲಿ ಮೂಕ ಪ್ರಾಣಿಗಳನ್ನು ಬಿಡುವವರ ಗಮನಕ್ಕೆ
ಗುತ್ತಿಗಾರು – ನಡುಗಲ್ಲು ರಸ್ತೆಯ ಹಾಲೆಮಜಲಿನಿಂದ ಮುಂದೆ ಕಾಡು ಪ್ರದೇಶದಲ್ಲಿ ವಿಶೇಷ ಬರಹವಿರುವ ಬ್ಯಾನರ್ ಕಂಡು ಬಂದಿದೆ.
ಬ್ಯಾನರ್ನಲ್ಲಿ ‘ಈ ಸ್ಥಳದ ಆಸು ಪಾಸಿನಲ್ಲಿ ನಾಯಿ ಹಾಗೂ ಇನ್ನಿತರ ಮೂಕ ಪ್ರಾಣಿಗಳನ್ನು ಬಿಡುವವರು ತಮ್ಮ ಹೆಂಡತಿ ಮಕ್ಕಳನ್ನು ಬಿಟ್ಟ ಹಾಗೆ’ ಎಂದು ಬರೆದಿದ್ದಾರೆ. ಅದನ್ನು ಮೆಸ್ಕಾಂ ನವರವರ ವಿದ್ಯುತ್ ಕೇಬಲ್ ನ ಬಂಡಲ್ ಸುತ್ತುವ ಚಕ್ರಕ್ಕೆ ಕಟ್ಟಲಾಗಿದೆ. ನಾಯಿ ಮರಿ, ಬೆಕ್ಕು, ಮುಂತಾದ ಪ್ರಾಣಿಗಳನ್ನು ಈ ಕಾಡು ದಾರಿಯಲ್ಲಿ ಬಿಟ್ಟು ಹೋಗುವವರನ್ನು ಉಲ್ಲೇಖಸಿ ಈ ಬರಹಗಳನ್ನು ಬರೆಯಲಾಗಿದೆ ಎಂದು ತಿಳಿದುಬಂದಿದೆ.