ದಿ. ಹಾಜಿ ಅಬ್ಬಾಸ್ ಕಟ್ಟೆಕಾರ್ ಹಾಗೂ ಹಾಜಿ ಕೆ.ಎಂ. ಅಬ್ದುಲ್ಲಾ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 ಸುಳ್ಯದ ಉದ್ಯಮ ಕ್ಷೇತ್ರದ ಹಿರಿಯ ನಾಯಕರಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆಗೈದು ಅಗಲಿದ ದಿವಂಗತ ಹಾಜಿ ಅಬ್ಬಾಸ್ ಕಟ್ಟೆಕಾರ್ ಹಾಗೂ ಮಲ್ನಾಡ್ ಕ್ಯಾಶ್ಯೂ ಮಾಲಕ ಗಾಂಧಿನಗರ ಜುಮಾ ಮಸ್ಜಿದ್ ನ ಅನೇಕ ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆಗೈದು ಕಳೆದ ಒಂದು ವರ್ಷಗಳ ಹಿಂದೆ ನಿಧನರಾದ ಹಾಜಿ ಕೆ ಎಂ ಅಬ್ದುಲ್ಲಾರವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ ಇಂದು ಜಟ್ಟಿಪಳ್ಳ ಅನ್ಸಾರಿಯ ಎಜುಕೇಶನಲ್ ಸೆಂಟರ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕೆಎ 21 ಸುಳ್ಯ ವಾಟ್ಸಾಪ್ ಗ್ರೂಪ್ ಮತ್ತು ಗಾಂಧಿ ರಾಯಲ್ಸ್ ವಾಟ್ಸಪ್ ಗ್ರೂಪ್ ವತಿಯಿಂದ ಬ್ಲಡ್ ಹೆಲ್ಪ್ಲೈನ್ ಕರ್ನಾಟಕ.ರಿ. ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷರಾಗಿ ಎಂ ಜೆ ಎಂ ಗಾಂಧಿನಗರ ಇದರ ಅಧ್ಯಕ್ಷ ಹಾಜಿ ಆದಂ ಕುಂಞಿ ಕಮ್ಮಾಡಿ ವಹಿಸಿದ್ದರು. ಅರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಿಜ್ವಾನ್ ಜಿ ಎಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ಥಳೀಯ ಮಸ್ಜಿದ್ ಖತೀಬರಾದ ಉಮ್ಮರ್ ಸಖಾಫಿ ಮರ್ದಾಳ ದುವಾಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ, ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ, ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಹಾಜಿ ಮುಸ್ತಫಾ ಜನತಾ, ನ ಪಂ ಸದಸ್ಯರುಗಳಾದ ಕೆ ಎಸ್ ಉಮ್ಮರ್, ಶರೀಫ್ ಕಂಠಿ, ಎಸ್ ಕೆ ಎಸ್ ಎಸ್ ಎಫ್ ವಿಕಾಯ ರಕ್ತದಾನಿ ಬಳಗದ ಮುಖಂಡ ತಾಜುದ್ದೀನ್ ಟರ್ಲಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು. ವೇದಿಕೆಯಲ್ಲಿ ಅನ್ಸಾರಿಯ ಎಜುಕೇಶನಲ್ ಸೆಂಟರ್ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜೆಎಸ್, ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಮುದರ್ರಿಸ್ ಅಬೂಬಕ್ಕರ್ ಹಿಮಾಮಿ ಸಖಾಫಿ,ಮುಅಲ್ಲೀಮರು ಗಳಾದ ನೌಶಾದ್ ಮದನಿ, ಹಂಝತುಲ್ ಕರ್ರಾರ್, ನ ಪಂ ಸದಸ್ಯ ರಿಯಾಜ್ ಕಟ್ಟೆಕಾರ್ಸ್, ಅಬ್ದುಲ್ ರಹೀಮ್ ಫ್ಯಾನ್ಸಿ, ಪಿ ಪಿ ಎಫ್ ಐ ಬ್ಲಡ್ ಡೋನರ್ಸ್ ಫಾರಂ ರಿಜ್ವಾನ್ ನಾವೂರು, ಎಸ್‌ಎಸ್‌ಎಫ್ ಬ್ಲಡ್ ಸೈಬೋದ ಮುಖಂಡ ಸಿದ್ದಿಕ್ ಗೂನಡ್ಕ ಮೊದಲಾದವರು ಉಪಸ್ಥಿತರಿದ್ದರು. ಸಂಘಟನಾ ಸಮಿತಿ ಸದಸ್ಯ ಇಕ್ಬಾಲ್ ಕನಕಮಜಲು ಸ್ವಾಗತಿಸಿ ನಿಝಾರ್ ಶೈನ್ ಅರಂಬೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಂಘಟಕರಾದ ಫೈಝಲ್ ಕಟ್ಟೆಕಾರ್ಸ್, ಬಶೀರ್ ಜನಪ್ರಿಯ, ಶಮೀರ್ ಮೊಬೈಲ್ ಹಾರ್ಟ್, ಮನ್ಸೂರ್ ಮೆಟ್ರೋ ಮೊದಲಾದವರು ಸಹಕರಿಸಿದರು.ನೂರಾರು ಯುವಕರು ರಕ್ತ ದಾನಿಗಳಾಗಿ ಭಾಗವಹಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.