ಸುಳ್ಯ ತಾಲೂಕು ಭಜನಾ ಪರಿಷತ್ ವತಿಯಿಂದ ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಏ. 24 ರಂದು ನಡೆಯಲಿರುವ ಭಜನಾ ಸಂಕೀರ್ತನೆಯ “ಭಜನಾಮೃತ ” ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕಿನ ಭಜನಾ ಮಂಡಳಿಯ ಪಾಲ್ಗೊಳ್ಳುವ ಕುರಿತು ಪೂರ್ವ ಭಾವಿ ಸಭೆಯು ಏ.4 ರಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಛೇರಿಯ ಸಭಾಂಗಣದಲ್ಲಿ ನಡೆಯಿತು. ಪರಿಷತ್ ರಾಜ್ಯಾಧ್ಯಕ್ಷ ಬಾಲಕೃಷ್ಣ ಪುತ್ಯ ಅಧ್ಯಕ್ಷತೆ ವಹಿಸಿದ್ದರು. ಭಜನಾಮೃತ ಸಮಿತಿಯ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಕಾರ್ಯಕ್ರಮ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಸಂಯೋಜಕ ರಾಜಮಣಿ ರೈ ಮಠಂತಬೆಟ್ಟು ಭಜನಾ ಮಂಡಳಿಯ ಭಾಗವಹಿಸುವಂತೆ ಪ್ರಸ್ತಾಪಿಸಿದರು. ವೇದಿಯಲ್ಲಿ ಪರಿಷತ್ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಗೌರವಾಧ್ಯಕ್ಷ ವಿಶ್ವನಾಥ ರೈ ಅರ್ಗುಡಿ, ಕಾರ್ಯದರ್ಶಿ ಯತೀಶ್ ರೈ ದುಗಲಡ್ಕ, ಯೋಗೀಶ್ ಎಸ್. ಸಾಮಾನಿ, ರೂಪೇಶ್, ಶಿಲ್ಪ ಪಿಲಿಗುಂಡ, ಮನೀಷಾ ಶೆಟ್ಟಿ, ಶ್ರದ್ಧಾ, ಪ್ರಸಕ್ತ ಪುತ್ತೂರು ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಸಂತ ಭಜನಾ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು. ಗೋಪಾಲ ಆಚಾರ್ಯ ಸುಳ್ಯ ರವರು ಪ್ರಾರ್ಥಿಸಿದರು. ಯತೀಶ್ ರೈ ಸ್ವಾಗತಿಸಿದರು.
ಮೇಲ್ವಿಚಾರಕಿ ಉಷಾ ಕಲ್ಯಾಣಿ ಕಾರ್ಯಕ್ರಮ ನಿರೂಪಿಸಿದರು. ಶಿವಪ್ರಸಾದ್ ಆಲೆಟ್ಟಿ ವಂದಿಸಿದರು.