ಬೆಳ್ಳಾರೆ ಗ್ರಾಮದ ನೆಟ್ಟಾರು-ಪೆಲತ್ತಮೂಲೆ ರಸ್ತೆ ಕಾಂಕ್ರೀಟ್ ಕಾಮಗಾರಿ ಆರಂಭವಾಗಿದೆ. ಶಾಸಕರು, ಕರ್ನಾಟಕ ಘನ ಸರ್ಕಾರದ ಮೀನುಗಾರಿಕೆ, ಬಂದರು ಹಾಗೂ ಒಳಸಾರಿಗೆ ಸಚಿವರಾದ ಎಸ್ .ಅಂಗಾರ ಇವರ ರೂಪಾಯಿ ಹತ್ತು ಲಕ್ಷ ಅನುದಾನದ ಕಾಮಗಾರಿ ಇದಾಗಿದೆ.
ಈಗ ಕಾಮಗಾರಿ ನಡೆಯುತ್ತಿರುವುದರಿಂದ ಬಹುವರ್ಷಗಳ ಕನಸು ನನಸಾಗಿದೆ ಅನ್ನುವ ಸಂತಸವನ್ನು ಈ ಭಾಗದ ಫಲಾನುಭವಿಗಳು ವ್ಯಕ್ತಪಡಿಸಿದ್ದಾರೆ. ಕಾಂಕ್ರೀಟ್ ಕಾಮಗಾರಿಗೆ ಮುಂಚೆ ರಸ್ತೆ ಸಮತಟ್ಟು ಮಾಡುವ ಕೆಲಸ ಆಗಬೇಕಿತ್ತು.ಆ ಸಂದರ್ಭದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಪನ್ನೆ ಹಾಗೂ ಬೆಳ್ಳಾರೆ ಗ್ರಾಮ ಸ್ವರಾಜ್ಯ ತಂಡದ ನಾಯಕ ಆರ್ ಕೆ ಭಟ್ ಕುರುಂಬುಡೇಲು ಸ್ಥಳಕ್ಕೆ ಭೇಟಿ ನೀಡಿದ್ದರು. ಇದೀಗ ಸಮತಟ್ಟು ಮಾಡುವ ಕೆಲಸ ಮುಗಿದು ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದೆ.
ಕಾಮಗಾರಿ ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಪನ್ನೆ, ಉಪಾಧ್ಯಕ್ಷೆ ಶ್ರೀಮತಿ ಗೌರಿ ನೆಟ್ಟಾರು, ಸದಸ್ಯೆ ಶ್ವೇತಾ ಶೈಲೇಶ್ ನೆಟ್ಟಾರು ಭೇಟಿ ನೀಡಿದರು.ಕಂಟ್ರಾಕ್ಟರ್ ಕರುಣಾಕರ ರೈ ಕೊಡಿಯಾಲ, ನೆಟ್ಟಾರು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಪ್ರವೀಣ್ ಚಾವಡಿಬಾಗಿಲು,ಊರವರು ಜೊತೆಗಿದ್ದರು.