ದೀಪಾರಾಧನೆ, ಭಜನಾ ಕಾರ್ಯಕ್ರಮ
ಗುಳಿಗ ದೈವದ ನರ್ತನ ಸೇವೆ
ಶ್ರೀ ಅಯ್ಯಪ್ಪ ಸೇವಾ ಸಮಿತಿ ಬೆಳ್ಳಾರೆ ಹಾಗೂ ಗುಳಿಗ ಆರಾಧನಾ ಸಮಿತಿ ಮಕ್ಕಿ ಉಜ್ರೋಳಿ ಬೆಳ್ಳಾರೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ಆಶೀರ್ವಾದದೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಗುಳಿಗ ದೈವದ ನರ್ತನ ಸೇವೆ ಎ.05 ರಂದು ನಡೆಯಿತು.
ಬೆಳಿಗ್ಗೆ ಶುದ್ಧಿ ಕಲಶ, ಗಣಪತಿ ಹವನ, ಸಂಜೆ ಗಂಟೆ 6.00 ಕ್ಕೆ ದೀಪಾರಾಧನೆ ಮತ್ತು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಸದಸ್ಯೆಯರಿಂದ ಹಾಗೂ ಶ್ರೀ ರಾಮ ಭಜನಾ ಮಂಡಳಿ ಕಿಲಂಗೋಡಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಸಂಜೆ ದೈವದ ಭಂಡಾರ ತೆಗೆಯಲಾಯಿತು.
ರಾತ್ರಿ ಮಂಗಳಾರತಿ,ಪ್ರಸಾದ ವಿತರಣೆ ನಡೆಯಿತು.ಗಂಟೆ 9.00 ರಿಂದ ದೈವದ ನರ್ತನ ಸೇವೆ ನಡೆಯಿತು.
ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಪ್ರಮೋದ್ ಕುಮಾರ್ ಶೆಟ್ಟಿ ಕುಂಟುಪುಣಿಗುತ್ತು ಮತ್ತು ಸದಸ್ಯರು, ಗುರುಸ್ವಾಮಿ ಹಾಗೂ ಶಿಷ್ಯ ವೃಂದದವರು, ಗುಳಿಗ ಆರಾಧನಾ ಸಮಿತಿ ಮಕ್ಕಿ ಬೆಳ್ಳಾರೆ ಇದರ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.