ಕೊಡಗು, ದ.ಕ. ಗೌಡ ಸೌಹಾರ್ದ ಕ್ರೆಡಿಟ್ ಲಿಮಿಟೆಡ್‌ನ ಮಡಿಕೇರಿ ಶಾಖೆ ಉದ್ಘಾಟನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಆರ್ಥಿಕವಾಗಿ ಹಿಂದುಳಿದ ಜನರ ಬೆಳವಣಿಗೆಗೆ ಸಂಘ ಪೂರಕವಾಗಲಿ : ಸಚಿವ ಅಂಗಾರ
ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕೊಡಗು, ದ.ಕ. ಗೌಡ ಸೌಹಾರ್ದ ಕ್ರೆಡಿಟ್ ಲಿಮಿಟೆಡ್‌ನ ಮಡಿಕೇರಿ ಶಾಖೆಯ ಉದ್ಘಾಟನೆ ಮಡಿಕೇರಿ ಚೌಕಿ ವೃತ್ತದಲ್ಲಿರುವ ಹಮೀದ್ ಶಾಪ್‌ನ ಒಂದನೇ ಮಹಡಿಯಲ್ಲಿ ಶುಭಾರಂಭಗೊಂಡಿತು. ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ನೂತನ ಶಾಖೆಯನ್ನು ಉದ್ಘಾಟಿಸಿದರು. ಬಳಿಕ ಮಡಿಕೇರಿ ಕಾವೇರಿ ಹಾಲ್‌ನಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು, ಕೊಡಗು ಜಿ.ಪಂ. ಅಧ್ಯಕ್ಷ ಬಿ..ಎ. ಹರೀಶ್, ಸಹಕಾರಿ ಸಂಘಗಳ ಉಪನಿಬಂಧಕ ಬಿ.ಎಕ. ಸಲೀಂ ಭಾಗವಹಿಸಿದ್ದರು. ಕೊಡಗು, ದ.ಕ. ಗೌಡ ಸೌಹಾರ್ದ ಕ್ರೆಡಿಟ್ ಲಿಮಿಟೆಡ್‌ನ ಅಧ್ಯಕ್ಷ ಹರೀಶ್ ದೇವಂಗೋಡಿ ಅಧ್ಯಕ್ಷತೆ ವಹಿಸಿದ್ದರು.
ಕೊಡಗು ಗೌಡ ಸಮಾಜ ಒಕ್ಕೂಟದ ಮಡಿಕೇರಿ ಇದರ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಮತ್ತು ದ.ಕ. ಗೌಡ ಸಮಾಜದ ಅಧ್ಯಕ್ಷ ತೇನನ ರಾಜೇಶ್ ಸೋಮಣ್ಣ, ಸುಳ್ಯ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ. ಜಯರಾಮ, ಮಡಿಕೇರಿ ಕೊಡಗು ಗೌಡ ಸಮಾಜದ ಅಧ್ಯಕ್ಷ ಪೆರಿಯಣ ಜಯಾನಂದ, ಮಡಿಕೇರಿ ಗೌಡ ವಿದ್ಯಾಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಗೌರವ ಉಪಸ್ಥಿತರಿದ್ದರು. ಕೊಡಗು, ದ.ಕ. ಗೌಡ ಸೌಹಾರ್ದ ಕ್ರೆಡಿಟ್ ಲಿಮಿಟೆಡ್‌ನ ಉಪಾಧ್ಯಕ್ಷ ಪಳಂಗಪ್ಪ ಪಾಣತ್ತಲೆ, ಕಾರ್ಯದರ್ಶಿ ಜಯಕುಮಾರ್ ಮಞಂಡ್ರ, ನಿರ್ದೇಶಕರುಗಳಾದ ರವೀಂದ್ರ ಕೇವಳ, ನಿಂಗರಾಜು ನಂಗಾರು, ಅಮರನಾಥ್ ಸುಳ್ಯಕೋಡಿ, ಡಾ.ಚೇತನ್ ಚೆಟ್ಟಿಮಾಡ, ಶ್ರೀಮತಿ ಜ್ಯೋತಿ ಕುಶಾಲಪ್ಪ ಪೊರೆಯಣ, ಶ್ರೀಮತಿ ದೇವಕಿ ಹುದೇರಿ, ವಿಶೇಷ ಆಹ್ವಾನಿತರಾಗಿರುವ ಹೂವಪ್ಪ ಗೌಡ ಅಡ್ಕಾರು, ಗಂಗಾಧರ ಗೌಡ ಕನ್ನಡ್ಕ, ಕೇಶವ ಪಳಂಗೋಟು ಇದ್ದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.