ಎಡಮಂಗಲ ಗ್ರಾಮದ ಕರಿಂಬಿಲದ ಕಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಪತಂಜಲಿ ಕುಟೀರವನ್ನು ಮತ್ತು ಮೇಲ್ಛಾವಣಿ ದುರಸ್ತಿ ಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಂಜ ಘಟಕದವರು ಶ್ರಮದಾನದ ಮೂಲಕ ಏಪ್ರಿಲ್ 3ರಂದು ದುರಸ್ತಿಗೊಳಿಸಿದರು. ಬಳಿಕ ಶಾಲಾ ವಠಾರವನ್ನು ಶುಚಿತ್ವ ಮಾಡಲಾಯಿತು.
ಈ ಸಂದರ್ಭದಲ್ಲಿ ಘಟಕದ ಸಂಯೋಜಕ ವಿಶ್ವನಾಥ ಸಂಪ ಹಾಗೂ ಸದಸ್ಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಂಜ ವಲಯದ ಮೇಲ್ವಿಚಾರಕ ವಸಂತ ಎಲ್., ಎಸ್ ಡಿಎಂಸಿ ಅಧ್ಯಕ್ಷ ಪದ್ಮನಾಭ ಗೌಡ ಪೂಜಾರಿ ಮನೆ ಕೇರ್ಪಡ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಭುವನ ಪಿ.ಆರ್., ಘಟಕದ ಸದಸ್ಯರಾದ ಮಾಧವ ಎಡಮಂಗಲ, ಧರ್ಮಪಾಲ ಕೇನ್ಯ, ಶ್ರೀನಿವಾಸ ಪಂಬೆತ್ತಾಡಿ, ಗಣೇಶ್ ಮುರುಳ್ಯ, ದಿನೇಶ್ ಮಾನ್ಯಡ್ಕ ಉಪಸ್ಥಿತರಿದ್ದರು.