ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ ರವರು ಶಾರದಾಂಬಾ ಕುಣಿತ ಭಜನಾ ತಂಡಕ್ಕೆ ಸಮವಸ್ತ್ರವನ್ನು ಕೊಡುಗೆಯಾಗಿ ನೀಡಿದರು.
ಎ.6.ರಂದು ಭಜನಾ ತಂಡದ ಸದಸ್ಯರಿಗೆ ಶ್ರೀ ಶಾರದಾಂಬಾ ಭಜನಾ ಮಂಡಳಿಯ ಆಂತರಿಕ ಲೆಕ್ಕ ಪರಿಶೋಧಕರಾದ ಬಾಲಕೃಷ್ಣ ಕುದ್ವ ರವರು ಸಮವಸ್ತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಕಾರ್ಯದರ್ಶಿ ಗುರುಪ್ರಸಾದ್ ತೋಟ, ತರಬೇತುದಾರರಾದ ರಮೇಶ್ ಮೆಟ್ಟಿನಡ್ಕ, ಪುರಂದರ ಶೆಟ್ಟಿ ನಾಗತೀರ್ಥ , ಹಾಗೂ ಶಶಿಧರ ಮಾವಿನಕಟ್ಟೆ, ಮತ್ತು ಸ್ಥಳೀಯ ಭಜನಾ ತಂಡದ ಮುಂದಾಳು ಪುರುಷೋತ್ತಮ ನಾಗತೀರ್ಥ,
ನಾಗತೀರ್ಥ ಅಂಗನವಾಡಿಯ ಪೋಷಕ ಸಮಿತಿಯ ಅಧ್ಯಕ್ಷೆ ಶ್ರೀಮತಿ ಸವಿತಾ ನಾಗತೀರ್ಥ ಮೊದಲಾದವರು ಉಪಸ್ಥಿತರಿದ್ದರು.
ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ ವತಿಯಿಂದ ಕುಣಿತ ಭಜನಾ ತರಬೇತಿಯು ನಡೆಯುತ್ತಿದ್ದು ಪುಟಾಣಿಗಳು ಸೇರಿದಂತೆ 73 ಜನರು ಮೂರು ತಂಡಗಳಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ ವತಿಯಿಂದ ಎಪ್ರಿಲ್ 14 ರಂದು ನಡೆಯುವ ಅರ್ಧ ಏಕಾಹ ಭಜನೆಯಂದು ತರಬೇತಿ ಪಡೆದ ಕುಣಿತ ಭಜನಾ ತಂಡದಿಂದ ಪ್ರಥಮ ಪ್ರದರ್ಶನ ನಡೆಯಲಿದೆ.