ಉಬರಡ್ಕ ಮಿತ್ತೂರು ಪಂಚಾಯತ್ ನ ಸಿಬ್ಬಂದಿ ಪ್ರವೀಣ್ ಕುಮಾರ್ ಯು. ರವರಿಗೆ ಮಹಾತ್ಮಗಾಂಧಿ ಉದ್ಯೋಗ ಖಾತರಿಯ ಡಾಟ ಎಂಟ್ರಿಗಾಗಿ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ.ಇವರು ಬಿಲ್ ಕಲೆಕ್ಟರ್ ಆಗಿ 2015ರಲ್ಲಿ ಸೇರಿದ್ದರೂ ನರೇಗಾದ ಡಾಟಾ ಎಂಟ್ರಿ ಕಾರ್ಯವನ್ನು ನಿರ್ವಹಿಸಿ 2017 ರಲ್ಲಿ ಖಾಯಂ ಸರಕಾರಿ ನೌಕರರಾದರು.ನರೇಗಾದ ಫಲಾನುಭವಿಗಳಿಗೆ ಶೀಘ್ರ ಹಣ ಮಂಜೂರು ಆಗುವಂತೆ ಸಹಕರಿಸಿದ್ದರು.
ಪ್ರಶಸ್ತಿಯನ್ನು ಎ.9 ರಂದು ಹುಬ್ಬಳ್ಳಿಯ ಹೋಟೆಲ್ ಡೆನಿಸನ್ಸ್ ನಲ್ಲಿ ನಡೆಯುವ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು.
ಇವರು ಉಬರಡ್ಕ ನಾರಾಯಣ ಪಾಟಾಳಿ ಮತ್ತು ಸರಸ್ವತಿ ದಂಪತಿಗಳ ಪುತ್ರ