ಬ್ಯಾಂಕ್ನಿಂದ ಅನ್ಯಾಯವಾಗಿಲ್ಲ : ಮೇನೇಜರ್ ಸ್ಪಷ್ಟನೆ
ಬೆಳ್ಳಾರೆ ಯೂನಿಯನ್ ಬ್ಯಾಂಕ್ನ ಎದುರು ಗ್ರಾಹಕರೋರ್ವರು ತನಗೆ ಅನ್ಯಾಯವಾಗಿದೆ ಎಂದು ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆದಿದೆ. ಬ್ಯಾಂಕಿನಿಂದ ಗ್ರಾಹಕನಿಗೆ ಯಾವುದೇ ಅನ್ಯಾಯವಾಗಿಲ್ಲ ಎಂದು ಮೇನೇಜರ್ ತಿಳಿಸಿದ್ದಾರೆ.
ಇಂದು ಅಪರಾಹ್ನ ತನ್ನ ಪತ್ನಿಯೊಂದಿಗೆ ಬಂದ ಕೊಡಿಯಾಲ ಗ್ರಾಮದ ಕೊಡಿಯಾಲ ಗ್ರಾಮದ ಸದಾಶಿವ ಪೂಜಾರಿ ಎಂಬುವವರು ತನ್ನ ಪ್ರತಿಭಟನೆ ವ್ಯಕ್ತಪಡಿಸಿದರು. ತಾನು ಬೆಳ್ಳಾರೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ 2014 ರಲ್ಲಿ 9.5 ಲಕ್ಷ ಸಾಲ ತೆಗೆದಿದ್ದೆ. ತಿಂಗಳಿಗೆ 12,೦೦೦ ದಂತೆ ಕಂತು ಕಟ್ಟುತ್ತಿದ್ದು , ನೋಟ್ ಬ್ಯಾನ್ನಿಂದಾಗಿ ಮತ್ತು ಕಳೆದ ವರ್ಷ ಕೊರೊನಾ ಸಮಸ್ಯೆಯಿಂದಾಗಿ ಬ್ಯುಸಿನೆಸ್ ನಷ್ಟವಾಗಿ ಕಂತು ಸರಿಯಾಗಿ ಕಟ್ಟಲಾಗಿರಲಿಲ್ಲ. ಈ ಹಿಂದೆ ಅಲ್ಲಿದ್ದ ಮೇನೇಜಜರ್ ಬಳಿಕ ಹೊಸದಾಗಿ ಬಂದ ಮೆನೇಜರ್ ೩ ಚೆಕ್ ಗಳನ್ನು ತೆಗೆದುಕೊಂಡಿದ್ದರು. ನಂತರ ಚೆಕನ್ನು ಬ್ಯಾಂಕಿನವರು ಕೊರ್ಟ್ ಗೆ ಹಾಕಿದ್ದರು. ಅಲ್ಲಿ ಮಾತುಕತೆಯಂತೆ ಮಾ.೩೦ ರಂದು ಪತ್ನಿಯ ಚಿನ್ನಾಭರಣವನ್ನು ಅಡವಿರಿಸಿ 1,1೦,೦೦೦ವನ್ನು ಕಟ್ಟಿದ್ದು 24,5೦೦ ಹಣ ಕಟ್ಟಲು ಸಮಯಾವಕಾಶ ಕೇಳಿದ್ದೆ. ಅದರಂತೆ ಇಂದು ಕಟ್ಟಬೇಕಿತ್ತು. ಇಂದು 24,5೦೦ ಹಣವನ್ನು ಕಟ್ಟಲು ಹೋದಾಗ ಬ್ಯಾಂಕಿನ ವಕೀಲರು ಮತ್ತು ಮೆನೇಜರ್ ಹಣವನ್ನು ತೆಗೆದುಕೊಳ್ಳದೆ ಎಲ್ಲಾ ಹಣವನ್ನು ಕಟ್ಟಬೇಕೆಂದು ಹೇಳುತ್ತಿದ್ದಾರೆ ಎಂದು ಸದಾಶಿವರು ಆರೋಪಿಸಿದ್ದಾರೆ. ಈ ಕುರಿತಂತೆ ಡಿಜಿಎಂ ಮಧ್ಯ ಪ್ರವೇಶಿಸಿ ನನಗೆ ನ್ಯಾಯ ಒದಗಿಸಿ ಕೊಡಬೇಕೆಂದು ಅವರು ಕೋರಿದ್ದಾರೆ.
ಈ ಕುರಿತಂತೆ ಬ್ಯಾಂಕಿನ ಮೇನೇಜರ್ ಸ್ಮಿತೇಶ್ ಅವರನ್ನು ಸಂಪರ್ಕಿಸಿದಾಗ, ಅವರು ಬ್ಯಾಂಕಿನಿಂದ ಸಾಲ ತೆಗೆದುಕೊಂಡಿದ್ದಾರೆ. ಸಾಲವನ್ನು ಸರಿಯಾಗಿ ಕಟ್ಟಿಲ್ಲ. ಈ ಕೇಸು ಕೋರ್ಟಲ್ಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಮಾ. 31ರ ಒಳಗಾದರೆ ಹಣವನ್ನು ರಿಯಾಯಿತಿ ಸ್ಕೀಂನಲ್ಲಿ ಕಟ್ಟಲು ಅವಕಾಶವಿತ್ತು. ಆದರೆ ಅವರು ಆ ಆಫರ್ ಲೆಟರ್ಗೆ ಸಹಿ ಹಾಕಿಲ್ಲ. ಅಲ್ಲದೆ 31ರ ಒಳಗೆ ಪೂರ್ತಿ ಹಣ ಕಟ್ಟಲೂ ಇಲ್ಲ. ಹೀಗಾಗಿ ಬ್ಯಾಂಕ್ ನಿಯಮವನ್ನು ತಿಳಿಸಿದ್ದೇವೆ ಎಂದು ಅವರು ಹೇಳಿದ್ದಾರೆ.