ಕಾಡಾನೆಯೊಂದು ದಾಳಿ ನಡೆಸಿ ಗಂಭೀರ ಗಾಯಗೊಂಡು ಸುಳ್ಯ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಇದೀಗ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಕಲ್ಮಕಾರಿನ ಶಿವರಾಮ ಮೆಂಟೆಕಜೆ ಎಂಬವರಿಗೆ ಕಾಡಾನೆ ದಾಳಿ ಮಾಡಿ ಅವರು ಗಂಭೀರವಾಗಿ ಗಾಯಗೊಂಡು ಸುಳ್ಯ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಮೃತಪಟ್ಟಿದ್ದಾರೆ.
ಶಿವರಾಮ ಮೆಂಟೆಕಜೆಯವರು ಇಂದು ಬೆಳಗ್ಗೆ ಕಾಡಿನಿಂದ ಬರುವ ನೀರಿನ ಕಣಿಯ ಕಸ ಬಿಡಿಸಿಕೊಂಡು ಬರಲು ಕಾಡಿಗೆ ತೆರಳಿದ್ದರು. ಆ ವೇಳೆ ಅವರ ಮೇಲೆ ಕಾಡಾನೆ ದಾಳಿ ಮಾಡಿದ್ದು ಸೊಂಡಿಲಿನಲ್ಲಿ ವ್ಯಕ್ತಿಯನ್ನು ಕೆಳಗೆ ಬೀಳಿಸಿತೆನ್ನಲಾಗಿದೆ. ಹೊಟ್ಟೆಯ ಕೆಳಗಿನ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದಿದ್ದು ಅವರನ್ನು ಮನೆಯವರು ಸುಳ್ಯದ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಮೃತಪಟ್ಟಿದ್ದಾರೆ .