ಅಮರ ಪಡ್ನೂರು ಗ್ರಾಮದ ಚೊಕ್ಕಾಡಿ ಬಳಿಯ ಕರ್ಮಜೆ ದಿ. ಜನಾರ್ಧನ ಗೌಡರ ಪುತ್ರ ಲವಕುಮಾರ ಎಂಬವರು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು, ಮಾ. 28ರಂದು ತಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿ ರಸ್ತೆಗೆ ಪ್ರವೇಶಿಸುವಾಗ ಅಪರಿಚಿತ ಕಾರೊಂದು ಅತೀ ವೇಗದಿಂದ ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಲವಕುಮಾರರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಲೆಯ ಹಿಂಭಾಗ, ಎದೆಯ ಭಾಗಕ್ಕೆ ಗಂಭೀರ ಗಾಯವಾಗಿರುವುದಲ್ಲದೆ, ಎರಡೂ ಕಾಲುಗಳ, ಒಂದು ಕೈಯ ಮೂಳೆ ಮುರಿತಗೊಂಡು ಅರೆಪ್ರಜ್ಞಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಇವರ ಚಿಕಿತ್ಸೆಗೆ 7 ರಿಂದ 10 ಲಕ್ಷದಷ್ಟು ವೆಚ್ಚ ತಗುಲಲಿದ್ದು, ಸಹೃದಯಿ ದಾನಿಗಳು ಧನ ಸಹಾಯವನ್ನು ನೀಡುವಂತೆ ಲವಕುಮಾರರ ಪತ್ನಿ ಶ್ರೀಮತಿ ಶಶಿ ಲವಕುಮಾರ್ ವಿನಂತಿ ಮಾಡಿಕೊಂಡಿದ್ದಾರೆ.
ಬ್ಯಾಂಕ್ ಖಾತೆ ವಿವರ:
KARNATAKA BANK Ltd
A/c No: 2952500100155001
IFSC Code: KBRB0000295
HALAGUR Branch
Google Pay and Contact No: 9663444577