ಆಯುರ್ವೇದ ವೈದ್ಯರುಗಳಾದ ಡಾ.ಲಕ್ಷ್ಮೀಶ ಕೆ.ಎಸ್. ಹಾಗೂ ಡಾ. ನಿತಿನ್ ಎ.ಸಿ. ಅವರ ಚಿರಂತನ ಆಯುರ್ವೇದ ಕ್ಲಿನಿಕ್ ಕಲ್ಲುಗುಂಡಿಯಲ್ಲಿ ಎ.8ರಂದು ಶುಭಾರಂಭಗೊಂಡಿತು.
ಕೆ.ವಿ.ಜಿ.ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಡಿ.ವಿ.ಲೀಲಾಧರ್ ಅವರು ದೀಪಬೆಳಗಿಸಿ, ಕ್ಲಿನಿಕನ್ನು ಉದ್ಘಾಟಿಸಿ, ಶುಭಾಂಶಸನೆಗೈದರು.
ಕಲ್ಲುಗುಂಡಿ ಚರ್ಚ್ ಧರ್ಮಗುರು ಫಾ. ಪೌಲ್ ಕ್ರಾಸ್ತ, ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಕೆ.ಹಮೀದ್, ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ್, ಕಲ್ಲುಗುಂಡಿ ವರ್ತಕರ ಸಂಘದ ಅಧ್ಯಕ್ಷ ಯು.ಬಿ.ಚಕ್ರಪಾಣಿ, ಸಂಪಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಕಲ್ಲುಗುಂಡಿ ಮಸೀದಿ ಅಧ್ಯಕ್ಷ ಅಬ್ಬಾಸ್ ಸಂಟ್ಯಾರ್, ಸಂಪಾಜೆ ಲಯನ್ಸ್ ಮಾಜಿ ಅಧ್ಯಕ್ಷ ಕಿಶೋರ್ ಪಿ.ಬಿ., ಕಲ್ಲುಗುಂಡಿ ಪೂರ್ಣಿಮಾ ಟೆಕ್ಸ್ ಟೈಲ್ ಮಾಲಕ ಬಿ.ಆರ್.ಪದ್ಮಯ್ಯ, ಡಾ. ಕುಮಾರ ಸುಬ್ರಹ್ಮಣ್ಯ , ಡಾ. ದಯಾಕರ, ಡಾ. ಹರ್ಷವರ್ಧನ, ಈಶ್ವರ ಆಚಾರ್ಯ ಕಲ್ಲುಗುಂಡಿ, ಚಿದಾನಂದ ಮಾಸ್ತರ್ ಅಡ್ತಲೆ, ಕೇಶವ ಬಂಗ್ಲೆಗುಡ್ಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಪ್ರವೀಣ್ ಸ್ವಾಗತಿಸಿ, ಕಲ್ಲುಗುಂಡಿ ಸ್ಪಾಟ್ ಕಂಪ್ಯೂಟರ್ ಮಾಲಕ ಕಿಶೋರ್ ಕಾರ್ಯಕ್ರಮ ನಿರೂಪಿಸಿದರು.