ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಮತ್ತು ಮಿತ್ರ ಮಂಡಲ ನಾಗತೀರ್ಥ ಇದರ ಜಂಟಿ ಆಶ್ರಯದಲ್ಲಿ ಹುತಾತ್ಮ ವೀರ ಯೋಧರಿಗೆ ಹಣತೆ ಹಚ್ಚಿ ಶ್ರದ್ಧಾಂಜಲಿ” ಕಾರ್ಯಕ್ರಮ ಎ.8.ರಂದು ಪಂಜ ಶ್ರೀಶಾರದಾಂಬಾ ಭಜನಾ ಮಂಡಳಿ ಸಭಾಂಗಣದಲ್ಲಿ
ಜರುಗಿತು.
ಎ.3.ರಂದು ಛತ್ತೀಸ್ ಘಡದ ಬಿಜಾಪುರ ಜಿಲ್ಲೆಯ ಸಿಲಗುರ್ ಅರಣ್ಯ ಪ್ರದೇಶದಲ್ಲಿ ನಿಷೇಧಿತ ಮಾವೋವಾದಿ ಸಂಘಟನೆಗಳು ನಡೆಸಿದ ದಾಳಿಯಲ್ಲಿ ಹುತಾತ್ಮರಾದ 22 ಸಿ ಆರ್ ಪಿ ಎಫ್ ಭದ್ರತಾ ಪಡೆಯ ವೀರ ಯೋಧರಿಗೆ ಹಣತೆ ಹಚ್ಚಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮಕ್ಕೆ ಮಾಜಿ ಸೈನಿಕರಾದ ಬಿ ಕೆ ಮಾಧವ ಗೌಡ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅದ್ಯಕ್ಷ
ಚಂದ್ರಶೇಖರ ಕರಿಮಜಲು ಅದ್ಯಕ್ಷತೆ ವಹಿದ್ದರು.
ಮಾಜಿ ಸೈನಿಕರಾದ ಚೆನ್ನಪ್ಪ ಗೌಡ ಬಪ್ಪನಮನೆ ,ಪದ್ಮನಾಭ ಗೌಡ ಬೊಳ್ಳಾಜೆ ,ದಾಮೋದರ ಪಲ್ಲೋಡಿ,ಬೇಬಿ ತೋಟ, ಹಾಗೂ ಪ್ರಸ್ತುತ ಸೇವೆಯಲ್ಲಿರುವ ರಾಧಾಕೃಷ್ಣ ಚೊಟ್ಟೆಮಜಲು,ಚಂದ್ರಶೇಖರ ಕಲ್ಕ ,ಮಿತ್ರ ಮಂಡಲ ನಾಗತೀರ್ಥ ಇದರ ಕಾರ್ಯದರ್ಶಿ ನಿತಿನ್ ನಾಗತೀರ್ಥ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ನಿರ್ದೇಶಕ,
ಚಂದ್ರಶೇಖರ ಕುಕ್ಕುಪುಣಿ , ಆಟೋ ಚಾಲಕರ ಸಂಘದ ಸದಸರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ
ಸಂದೀಪ್ ಪಲ್ಲೋಡಿ ಸ್ವಾಗತಿಸಿದರು. ದಾಮೋದರ ನೇರಳ ಕಾರ್ಯಕ್ರಮವನ್ನು ನಿರೂಪಿಸಿದರು. ಶರತ್ ಕುದ್ವ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.