ಕುಂಜಾಡಿ ಧರ್ಮ ನೇಮೋತ್ಸವ ಪ್ರಯುಕ್ತ ನಡೆದ ಭಜನಾ ಮಂಗಲೋತ್ಸವ – ಭಕ್ತಿ ಭಾವದ ಭಕ್ತಿ ಗಾನ ಸುಧಾ

Advt_Headding_Middle
Advt_Headding_Middle

 

ಕುಂಜಾಡಿ ತರವಾಡು ಧರ್ಮ ನೇಮೋತ್ಸವದ ಪ್ರಯುಕ್ತ ಪರಮಪೂಜ್ಯ ಮೋಹನದಾಸ ಸ್ವಾಮೀಜಿಯವರ ನೇತೃತ್ವದಲ್ಲಿ ಏ.8 ರಂದು ಆರಂಭಗೊಂಡ ಭಜನೋತ್ಸವದ ಮಂಗಲೋತ್ಸವ ಕಾರ್ಯಕ್ರಮ ಏ .9 ರಂದು ಸಂಪನ್ನಗೊಂಡಿತು. ಸುಮಾರು ಆಯ್ದ 24 ಭಜನಾ ತಂಡವು ನಿರಂತರವಾಗಿ ಭಜನೆಯಲ್ಲಿ ತೊಡಗಿಸಿಕೊಂಡಿದ್ದರು. ಆಕರ್ಷಕ ಕುಣಿತ ಭಜನೆಯು ಭಕ್ತ ಜನರ ಮನಸೂರೆಗೊಂಡಿತು. ಸ್ವಾಮೀಜಿಯವರ ಮಂಗಳ ಗೀತೆಯ ಮೂಲಕ ಭಜನೆಯು ಸಂಪನ್ನಗೊಂಡಿತು. ಭಜನಾ ತಂಡದ ಸದಸ್ಯರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಕುಂಜಾಡಿ ಕುಟುಂಬಸ್ಥರ ಪರವಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಅಭಿನಂದಿಸಿದರು. ಬಳಿಕ ಖ್ಯಾತ ಗಾಯಕ ಜಗದೀಶ ಆಚಾರ್ಯ ಪುತ್ತೂರು ಮತ್ತು ಬಳಗದವರಿಂದ ಭಕ್ತಿ ಗಾನ ಸುಧಾ ಕಾರ್ಯಕ್ರಮ ನಡೆಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.