ಎಸ್.ವೈ.ಎಸ್ ಹಾಗು ಎಸ್ಸೆಸ್ಸೆಫ್ ವತಿಯಿಂದ ಇರುವಂಬಳ್ಳದಲ್ಲಿ  ವಾರ್ಷಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್

Advt_Headding_Middle
Advt_Headding_Middle

ಎಸ್ ವೈ ಎಸ್ ಹಾಗು ಎಸ್ಸೆಸ್ಸೆಫ್ ಇರುವಂಬಳ್ಳ ಶಾಖೆ ಇದರ ವತಿಯಿಂದ ಪ್ರತೀ ತಿಂಗಳು ನಡೆಸಿಕೊಂಡು ಬರುತ್ತಿರುವ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ಇದರ ನಾಲ್ಕನೇ ವಾರ್ಷಿಕ ಹಾಗು ರಂಝಾನ್ ಪ್ರಭಾಷಣ  ತಾಜುಲ್ ಉಲಮಾ ನಗರದ ಅಬ್ದುಲ್ ನಾಸಿರ್ ವೇದಿಕೆಯಲ್ಲಿ ನಡೆಯಿತು.

ಅಸ್ಸಯ್ಯದ್ ಉಮರುಲ್ ಜಿಫ್ರಿ ತಂಙಳ್ ಕುಂಬಕ್ಕೋಡ್ ದುಆ ಮಾಡಿದರೆ,
ಹಂಝ ಮಿಸ್ಬಾಹಿ ಓಟಪದವು ಮುಖ್ಯ ಪ್ರಬಾಷಣಗೈದರು.

ವೇದಿಕೆಯಲ್ಲಿ ಹುಸೈನ್ ತಂಙಳ್ ಆದೂರು, ಹನೀಫ್ ಸಅದಿ ಮೈತ್ತಡ್ಕ, ಹಾಜಿ.ಕೆ.ಪಿ.ಹಸೈನಾರ್ ಮದನಿ ಕೋದಪ್ಪಾಡಿ, ಜಿ.ಎಸ್.ಅಬ್ದುಲ್ ಖಾದಿರ್ ಸಅದಿ ಗೋರಡ್ಕ , ಎ‌.ಬಿ. ಅಶ್ರಫ್ ಸಅದಿ ಅಡ್ಕ, ಇರುವಂಬಳ್ಳ ಖತೀಬ್ ಹಸೈನಾರ್ ಸಅದಿ , ಬಶೀರ್ ಮುಸ್ಲಿಯಾರ್ ಪಾಣಾಜೆ ಹಾಗು ಸಿದ್ದೀಕ್ ಕಟ್ಟೆಕಾರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಾಫಿಳ್ ಅಬ್ದುಲ್ ಸಮದ್ ಗೋರಡ್ಕ ಹಾಗು ಪಳ್ಳಿಕುಂಞಿ ಇರುವಂಬಳ್ಳರವರನ್ನು ಶಾಲು ಹೊದಿಸಿ ,ಕಿರುಕಾಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.

ಅಶ್ರಫ್ ಅಮಾನಿ ಪುಳಿಯಡಿಯವರು ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮೊದಲು ಹಾಜಿ.ಕೆ.ಪಿ.ಹಸೈನಾರ್ ಮದನಿ ಕೋದಪ್ಪಾಡಿ ಯವರ ನೇತೃತ್ವದಲ್ಲಿ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ನಡೆಯಿತು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.