ಬೀಜದಕಟ್ಟೆ ಸಜ್ಜನ ಪ್ರತಿಷ್ಠಾನ ವತಿಯಿಂದ ರಂಝಾನ್ ಪ್ರಭಾಷಣ

Advt_Headding_Middle
Advt_Headding_Middle

ಗೂನಡ್ಕದ ಬೀಜದಕಟ್ಟೆ ಸಜ್ಜನ ಪ್ರತಿಷ್ಠಾನ ವತಿಯಿಂದ ರಂಝಾನ್ ಪ್ರಭಾಷಣ ಎಂಬ ವಿಷಯದ ಮೂಲಕ ರಂಝಾನಿನಲ್ಲಿ ಅಳವಡಿಸಿಕೊಳ್ಳಬೇಕಾದ ಧಾರ್ಮಿಕ ವಿಧಿವಿಧಾನಗಳ ಕುರಿತು ಉಪಾನ್ಯಾಸ ಕಾರ್ಯಕ್ರಮ ಎ. 1೦ ರಂದು ಗೂನಡ್ಕದಲ್ಲಿರುವ ಸಜ್ಜನ ಸಭಾಂಗಣದಲ್ಲಿ ನಡೆಯಿತು.
ಅರಂತೋಡು ಬದ್ರಿಯಾ ಜುಮಾ ಮಸ್ಜಿದ್ ಖತೀಬರಾದ ಗೌರವಾನ್ವಿತ ಅಲ್ಹಾಜ್ ಇಸಾಕ್ ಬಾಖವಿಯವರು ಕಾರ್ಯಕ್ರಮವನ್ನು ದುವಾ ಪ್ರಾರ್ಥನೆ ನೆರವೇರಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಇಸಾಕ್ ಬಾಖವಿಯವರು, ‘ರಂಝಾನ್ ತಿಂಗಳು ಎನ್ನುವುದು ಹನ್ನೊಂದು ತಿಂಗಳಲ್ಲಿ ಅರಿತೊ ಅರಿಯದೆಯೋ ಮಾಡಿದ ಪಾಪಗಳನ್ನು ಮನ್ನಿಸಲು ಅಲ್ಲಾಹುವಿನಲ್ಲಿ ಪಾಪ ವಿಮೋಚನೆ ಬೇಡುವ ತಿಂಗಳಾಗಿದೆ’ ಎಂದರು.
ಗೂನಡ್ಕ ಬದ್ರಿಯಾ ಮಸ್ಜಿದ್ ಸಹಾಯಕ ಖತೀಬರಾದ ಗೌರವಾನ್ವಿತ ಹಬೀಬ್ ಹಿಮಮಿಯವರು ಶುಭಕೋರಿದರು.
ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಅಧ್ಯಕ್ಷರಾದ ಡಾ. ಉಮ್ಮರ್ ಬೀಜದಕಟ್ಟೆಯವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಮುಖ್ಯ ಪ್ರಭಾಷಣಗಾರರಾದ ಕೇಂದ್ರ ಜುಮಾ ಮಸ್ಜಿದ್ ಸುಳ್ಯದ ಸಹಾಯಕ ಖತೀಬರಾದ ಗೌರವಾನ್ವಿತ ಶೌಕತ್ ಅಲಿ ಅಮಾನಿಯವರು ರಂಝಾನ್ ಪೂರ್ವ ತಯಾರಿ ಮತ್ತು ರಂಝಾನ್ ತಿಂಗಳಿನಲ್ಲಿ ಪಾಲಿಸಬೇಕಾದ ವಿಧಿವಿಧಾನಗಳ ಬಗ್ಗೆ ಉಪನ್ಯಾಸ ನೀಡಿದರು. ಪೈಗಂಬರ್ ಮುಹಮ್ಮದ್ ನೆಬಿ(ಸ.ಅ) ಯವರು ಕಲಿಸಿಕೊಟ್ಟಂತಹ ಜೀವನ ಶೈಲಿಯನ್ನು ನಾವು ಕೂಡ ಅಳವಡಿಸಿ ಅಲ್ಲಾಹುವಿನ ಕೃಪೆಗೆ ಪಾತ್ರರಾಗಬೇಕೆಂದು ಕರೆನೀಡಿದರು.
ವಿಖಾಯದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಶ್ರೀ ತಾಜುದ್ದೀನ್ ಟರ್ಲಿ , ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ನಿರ್ದೇಶಕರಾದ ರಹೀಂ ಬೀಜದಕಟ್ಟೆ , ವಹಾಬ್ ಅಡಿಮಾರಡ್ಕ , ಮಂಜುನಾಥ್ ಹಿರಿಯೂರ್ ಹಾಗು ಅನ್ಸೀಫ್ ಪೇರಡ್ಕ ಮೊದಲಾದವರು ಸ್ವಯಂಸೇವಕರಾಗಿ ಸಹಕರಿಸಿದರು.
ಇಬ್ರಾಹಿಂ ಬೆಳ್ಳಾರೆ ವಂದಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.