ಯೇನೆಕಲ್ಲು : ದಿ. ಮುತ್ತಪ್ಪ ಮಾಸ್ತರ್ ಸ್ಮರಣಾರ್ಥ ರಕ್ತದಾನ ಶಿಬಿರ

Advt_Headding_Middle
Advt_Headding_Middle

 

 

ಶಶಾಂಕ ಚಾರಿಟೇಬಲ್ ಟ್ರಸ್ಟ್ ಯೇನೆಕಲ್ಲು, ನಮ್ಮ ಹೆಜ್ಜೆ ಟ್ರಸ್ಟ್ ಹಾಸನ ಮತ್ತು ರೈತ ಯುವಕ ಮಂಡಲ‌ ಯೇನೆಕಲ್ಲು ಇವುಗಳ ಜಂಟಿ ಆಶ್ರಯದಲ್ಲಿ ರೋಟರಿ, ಕ್ಯಾಂಪ್ಕೋ‌ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಹಕಾರದೊಂದಿಗೆ
ಶಿಕ್ಷಕರಾಗಿದ್ದ ದಿ. ಮುತ್ತಪ್ಪ ಎಂ.ಎಂ. ಮಾದನಮನೆಯವರ ಸ್ಮರಣಾರ್ಥ ರಕ್ತದಾನ ಶಿಬಿರವು ಏ. 10ರಂದು‌ ಯೇನೆಕಲ್ಲಿನ ಗೌರವ ಗಾರ್ಡನ್ ನಲ್ಲಿ ಶ‌ಶಾಂಕ‌ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಪೃಥ್ವಿ ಕುಮಾರ್ ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ತಾ.ಪಂ.‌ ಸದಸ್ಯ ಅಶೋಕ್ ನೆಕ್ರಾಜೆ ಶಿಬಿರವನ್ನು‌ ಉದ್ಘಾಟಿಸಿದರು. ರೋಟರಿ ಕ್ಲಬ್ ಕ್ಯಾಂಪ್ಕೋ ಬ್ಲಡ್ ಬ್ಯಾಂಕಿನ ವೈದ್ಯರಾದ ಡಾ. ರಾಮಚಂದ್ರ ಭಟ್ ಅಭ್ಯಾಗತರಾಗಿ ಭಾಗವಹಿಸಿ ರಕ್ತಾದಾನದ ಬಗ್ಗೆ ಮಾಹಿತಿ ನೀಡಿದರು. ಸುಬ್ರಹ್ಮಣ್ಯ ಗ್ರಾ.ಪಂ.‌ ಸದಸ್ಯರುಗಳಾದ ಮೋಹನ್ ಕೋಟಿಗೌಡನಮನೆ, ಶ್ರೀಮತಿ ಭಾರತೀ ದಿನೇಶ್, ನಮ್ಮ ಹೆಜ್ಜೆ ಟ್ರಸ್ಟ್ ಹಾಸನ‌ ಇದರ ಅಧ್ಯಕ್ಷ ನಾಗೇಶ್ ಕೆ.ಎಸ್, ಯೇನೆಕಲ್ಲು ರೈತ ಯುವಕ ಮಂಡಲದ ಅಧ್ಯಕ್ಷ ಜೀವನ್ ಚಳ್ಳಂಗಾರು ಮತ್ತು ದಿ. ಮುತ್ತಪ್ಪ ಮಾದನಮನೆಯವರ ಧರ್ಮಪತ್ನಿ‌ ಬಾನಡ್ಕ‌ ಸ.ಕಿ.ಪ್ರಾ.‌ಶಾಲಾ‌ ಮುಖ್ಯ ಶಿಕ್ಷಕಿ ಶ್ರೀಮತಿ ಜಾನಕಿ ಮುತ್ತಪ್ಪ ಮಾಸ್ತರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುಷ್ಪರಾಜ್ ಸ್ವಾಗತಿಸಿ ‌ಸೌಮ್ಯ ಜಿ ವಂದಿಸಿದರು. ಬಳ್ಪ ಶಾಲಾ‌ ಶಿಕ್ಷಕ ಆನಂದ ಕಾರ್ಯಕ್ರಮ ನಿರೂಪಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.