ದುಗಲಡ್ಕದಲ್ಲಿ ಬಲೇ ತಾರಾಯಿ ಕುಟ್ಟುಕೋ ಪಂತೋ ಕಾರ್ಯಕ್ರಮ

Advt_Headding_Middle
Advt_Headding_Middle

 

 

ಬಿಸು ಹಬ್ಬದ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ ಆಯೋಜನೆ

ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳುಕೂಟ ದುಗಲಡ್ಕ ಇದರ ಆಶ್ರಯದಲ್ಲಿ ಒಡಿಯೂರು ಶ್ರೀ ಗಳ ಷಷ್ಠ್ಯಬ್ದ ಸಂಭ್ರಮ ಸಮಿತಿಯ ಸಹಯೋಗದೊಂದಿಗೆ ಬಿಸು ಹಬ್ಬದ ಪ್ರಯುಕ್ತ ಬಲೇ ತಾರಾಯಿ ಕುಟ್ಟುಕೋ ಪಂತೋ ಹಾಗೂ ಇತರ ಆಟೋಟ ಸ್ಪರ್ಧೆ ಮತ್ತು ಬಿಸುಕಣಿ ಎ.14 ರಂದು ಮಿತ್ರ ಯುವಕ ಮಂಡಲ ಕಟ್ಟಡದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ,ಬಿಸುಕಣಿಯ ಮುಂದೆ ದೀಪ ಬೆಳಗಿಸಿ ಪೆರಾಜೆ ಪ್ರೌಢಶಾಲಾ ಮುಖ್ಯ ಶಿಕ್ಷಕ ದೊಡ್ಡಣ್ಣ ಬರೆಮೇಲು ಶುಭ ಹಾರೈಸಿದರು. ಸುಳ್ಯದ ಭಗವಾನ್ ಕನ್ ಸ್ಟ್ರಕ್ಷನ್ ಮಾಲಕ ಕೆ.ಎಸ್‌.ಗೋಪಾಲಕೃಷ್ಣ ಕರೋಡಿ ಮುಖ್ಯ ಅತಿಥಿಯಾಗಿದ್ದರು.ಸಭೆಯ ಅಧ್ಯಕ್ಷತೆಯನ್ನು ಕುರಲ್ ತುಳುಕೂಟದ ಅಧ್ಯಕ್ಷ ನಾರಾಯಣ ಟೈಲರ್ ವಹಿಸಿದ್ದರು. ನಗರ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಶೀಲಾವತಿ ಮಾಧವ,ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ ಶುಭ ಹಾರೈಸಿದರು.
ವೇದಿಕೆಯಲ್ಲಿ ಯುವಕ ಮಂಡಲದ ಅಧ್ಯಕ್ಷ ದಿನೇಶ್ ಕೊಯಿಕುಳಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದುಗಲಡ್ಕ ಅಂಗನವಾಡಿಗೆ ಯುವಕ ಮಂಡಲದ ವತಿಯಿಂದ 10 ಚೆಯರ್ ನ್ನು ಕೊಡುಗೆಯಾಗಿ ನೀಡಲಾಯಿತು. ತಾಲೂಕು ಮಟ್ಟದ ಕೃಷಿ ಪ್ರಶಸ್ತಿ ಪುರಸ್ಕೃತರಾದ ಯುವಕ ಮಂಡಲದ ಪೂರ್ವಾಧ್ಯಕ್ಷ ಕೆ.ಟಿ‌. ಭಾಗೀಶ್ ರವರನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಕು.ಪೃಥ್ವಿ ಮಾಧವ ಪ್ರಾರ್ಥಿಸಿದರು.
ಕುರಲ್ ತುಳುಕೂಟದ ಕೋಶಾಧಿಕಾರಿ ಮನೋಜ್ ಪಾನತ್ತಿಲ ಸ್ವಾಗತಿಸಿ, ಕಾರ್ಯದರ್ಶಿ ನವ್ಯ ದಿನೇಶ್ ಕೊಯಿಕುಳಿ ವಂದಿಸಿದರು.ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತೆಂಗಿನ ಕಾಯಿ ಕುಟ್ಟುವ ಸ್ಪರ್ಧೆ ಮತ್ತು ವಿವಿಧ ಆಟೋಟ ಸ್ಪರ್ಧೆ ನಡೆಯಿತು. ಬಲೇ ತಾರಾಯಿ ಕುಟ್ಟುಕೋ ಸ್ಪರ್ಧೆಯಲ್ಲಿ ರೋಹಿತ್ ಪಂಜ ಪ್ರಥಮ ಹಾಗು ಮಹೇಶ್ ಪಂಜ ದ್ವಿತೀಯ ಸ್ಥಾನದೊಂದಿಗೆ ನಗದು ಮತ್ತು ಶಾಶ್ವತ ಫಲಕ ಪಡೆದರು.
ಬಹುಮಾನ ವಿತರಣೆಯನ್ನು ಕೃಷಿ ಇಲಾಖೆ ತಾಂತ್ರಿಕ ಕೃಷಿ ಅಧಿಕಾರಿ ಮೋಹನ ನಂಗಾರು ನೆರವೇರಿಸಿದರು.ದುಗಲಡ್ಕ ಪ್ರೌಢಶಾಲಾ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಎ‌.ಯು.ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಅಧ್ಯಕ್ಷತೆಯನ್ನು ಯುವಕ ಮಂಡಲ ಅಧ್ಯಕ್ಷ ದಿನೇಶ್ ಕೊಯಿಕುಳಿ ವಹಿಸಿದ್ದರು. ಧ.ಗ್ರಾ‌.ಯೋಜನೆಯ ಒಕ್ಕೂಟದ ಅಧ್ಯಕ್ಷ ಯತೀಶ್ ರೈ ದುಗಲಡ್ಕ, ಕುರಲ್ ತುಳುಕೂಟದ ಸಂಚಾಲಕ ಕೆ‌.ಟಿ.ವಿಶ್ವನಾಥ, ಅಧ್ಯಕ್ಷ ನಾರಾಯಣ ಟೈಲರ್,ಮಿತ್ರ ಯುವಕ ಮಂಡಲದ ಪೂರ್ವಾಧ್ಯಕ್ಷ ಶಶಿಧರ ಎ‌ಂ.ಜೆ.,ಕೋಶಾಧಿಕಾರಿ ಚಿದಾನಂದ ಕೊಯಿಕುಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವಕ ಮಂಡಲದ ಪೂರ್ವಾಧ್ಯಕ್ಷರಾದ ಭವಾನಿಶಂಕರ ಕಲ್ಮಡ್ಕ ಸ್ವಾಗತಿಸಿ,ಶೇಖರ್ ಕುದ್ಪಾಜೆ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ಅಕ್ಷಯ್ ಮೂಡೆಕಲ್ಲು ವಂದಿಸಿದರು. ಮನೋಜ್ ಪಾನತ್ತಿಲ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.