ಪಂಜ: ಗಾಳಿ ಮಳೆಗೆ‌ ಅಪಾರ ಹಾನಿ

Advt_Headding_Middle
Advt_Headding_Middle

ಸಚಿವ ಎಸ್ ಅಂಗಾರ ಭೇಟಿ

ಕೂತ್ಕುಂಜ ಮತ್ತು ಐವತ್ತೊಕ್ಲು , ಪಂಬೆತ್ತಾಡಿ ಗ್ರಾಮಗಳಲ್ಲಿ ಎ.14.ರಂದು ಅಪ್ಪಳಿಸಿದ ಗಾಳಿ ಮಳೆಗೆ ಅನೇಕ ಮನೆಗಳ ಮೇಲೆ ಮರ ಉರುಳಿ ಹಾನಿಯಾಗಿದೆ. ಕೃಷಿ ತೋಟಗಳಿಗೆ ಹಾನಿಯಾಗಿದ್ದು ಅಪಾರ ನಷ್ಟ ಸಂಭವಿಸಿದೆ.

ಎ.16 ರಂದು ಸಚಿವ ಅಂಗಾರ ರವರು ಪಂಜ ಗ್ರಾಮ ಪಂಚಾಯತ್ ಗೆ ಆಗಮಿಸಿ ಹಾನಿಯಾದ ಕುರಿತು ವಿವಿಧ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಪರಿಹಾರ ನೀಡುವಂತೆ ಸಲಹೆ ನೀಡಿದರು.

ಬಳಿಕ ಅವರು ಗಾಳಿಗೆ ಮರ ಬಿದ್ದು ಮನೆಗೆ ಭಾಗಶಃ ಹಾನಿಯಾಗಿದ್ದ ಕೂತ್ಕುಂಜ ಗ್ರಾಮದ ಕೃಷ್ಣನಗರ ದಾಮೋದರ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು .

ಸುಳ್ಯ ತಹಸೀಲ್ದಾರ್ ಕು.ಅನಿತಾ ಲಕ್ಷ್ಮಿ, ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ದೇರಾಜೆ, ಗ್ರಾಮ ಪಂಚಾಯತ್ ಸದಸ್ಯರಾದ ವೀಣಾ ಪಂಜ, ನೇತ್ರಾವತಿ ಕಲ್ಲಾಜೆ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಲಿಗೋಧರ ಆಚಾರ್ಯ, ಪಂಜ ನಾಡ ಕಛೇರಿ ಉಪತಹಸೀಲ್ದಾರ್ ಉದಯಕುಮಾರ್, ಪಂಜ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಣಿಯಾನ ಪುರುಷೋತ್ತಮ,ಪಂಜ ಹೋಬಳಿಯ ಕಂದಾಯ ನಿರೀಕ್ಷಕ ಎಂ ಎಲ್ ಶಂಕರ, ಮೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಪುತ್ತೂರು ನರಸಿಂಹ , ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುಬ್ರಹ್ಮಣ್ಯ ಚಿದಾನಂದ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪಂಜ ಹರಿಕೃಷ್ಣ ,ತೋಟಗಾರಿಕಾ ಇಲಾಖೆ ಅಧಿಕಾರಿ ಸುಹಾನ ,ಪಂಜ ಗ್ರಾಮ ಲೆಕ್ಕಾಧಿಕಾರಿ ಯಲ್ ಯಂ ತುಕರಾಮ್, ಕಲ್ಮಡ್ಕ ಗ್ರಾಮ ಲೆಕ್ಕಾಧಿಕಾರಿ ಯಾನ್ ಯಂ ಶಿವಾಜಿ, ಗ್ರಾಮ ಸಹಾಯಕರಾದ ದೀಕ್ಷಿತ್ ಕೆ ಎನ್ , ಸೀತಾರಾಮ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.