ಅಮರಮುಡ್ನೂರು: ಕುಕ್ಕುಜಡ್ಕದಲ್ಲಿ ಸಚಿವ ಅಂಗಾರ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ರವರಿಂದ ರಸ್ತೆ ಕಾಮಗಾರಿಗೆ ಶಂಕು ಸ್ಥಾಪನಾ ಕಾರ್ಯಕ್ರಮ

Advt_Headding_Middle
Advt_Headding_Middle

 

ಅಮರಮುಡ್ನೂರು ಗ್ರಾಮದ ಅಜ್ಜನಗದ್ದೆ ಕುಕ್ಕುಜಡ್ಕ ಪೈಲಾರು ಜಬಳೆ ಸಂಪರ್ಕ ರಸ್ತೆಗೆ ಪ್ರಧಾನ ಮಂತ್ರಿ ಸಡಕ್ ಯೋಜನೆಯಲ್ಲಿ ರೂ.5.43 ಕೋಟಿ ಅನುದಾನ ಬಿಡುಗಡೆಗೊಂಡು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಏ.16 ರಂದು ಗುದ್ದಲಿ ಪೂಜೆಯನ್ನು ಕುಕ್ಕುಜಡ್ಕದಲ್ಲಿ ನೆರವೇರಿಸಲಾಯಿತು.

ಪುರೋಹಿತರು ಧಾರ್ಮಿಕ ಪೂಜೆಯನ್ನು ನೆರವೇಸಿದ ನಂತರ ಮೀನುಗಾರಿಕಾ ಬಂದರು ಸಚಿವ ಎಸ್.ಅಂಗಾರರವರು ಹಾಗೂ ಮಂಗಳೂರು ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ತೆಂಗಿನ ಕಾಯಿ ಒಡೆಯುವ ಮೂಲಕ ಗುದ್ದಲಿಪೂಜೆಯನ್ನು ನೆರವೇರಿಸಿದರು.



ಬಳಿಕ ಶಂಕು ಸ್ಥಾಪನಾ ಸಮಾರಂಭವು ಅಮರ ಸಹಕಾರ ಸಭಾಭವನದಲ್ಲಿ ನಡೆಯಿತು. ಸಂಸದರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ದೀಪ ಬೆಳಗಿಸಿದರು.ವೇದಿಕೆಯಲ್ಲಿ ಸಚಿವ ಎಸ್. ಅಂಗಾರ, ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ಪಂಚಾಯತ್ ಅಧ್ಯಕ್ಷೆ ಪದ್ಮಪ್ರಿಯ ಮೇಲ್ತೋಟ, ತಾ.ಪಂ.ಸದಸ್ಯ ರಾಧಾಕೃಷ್ಣ ಬೊಳ್ಳೂರು, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ಎ.ವಿ.ತೀರ್ಥರಾಮ, ಅಧಿಕಾರಿಗಳಾದ ಶ್ರೀನಿವಾಸ ಮೂರ್ತಿ, ಹರೀಶ್ ಕುಮಾರ್, ಸೊಸೈಟಿ ಸಿ.ಇ.ಒ. ಮೋಹನ್ ಕುಮಾರ್ ಪೊಯ್ಯಮಜಲು ಉಪಸ್ಥಿತರಿದ್ದರು.

 


ಈ ಸಂದರ್ಭದಲ್ಲಿ ಸಚಿವರನ್ನು ಮತ್ತು ಸಂಸದರನ್ನು ಶಾಲು ಹೊದಿಸಿ ಹಾರಾರ್ಪಣೆ ಮಾಡಿ ಪೇಟ ತೊಡಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಕುಕ್ಕುಜಡ್ಕ ಪೇಟೆಯಿಂದ ಸಚಿವರನ್ನು ಹಾಗೂ ಸಂಸದರನ್ನು ಸಿಂಗಾರಿಮೇಳ ಚೆಂಡೆ ವಾದನ ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆಯ ಮೂಲಕ ಗ್ರಾಮಸ್ಥರು ಸ್ವಾಗತಿಸಿದರು.ಶ್ರೀಮತಿ ಸರೋಜ ಸಂಕೇಶ ರವರು ಪ್ರಾರ್ಥಿಸಿದರು.
ರಾಧಾಕೃಷ್ಣ ಬೊಳ್ಳೂರು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ತಿಮ್ಮಪ್ಪ ಕೊಂಡೆಬಾಯಿ ಮತ್ತು ದಯಾನಂದ ಪತ್ತುಕುಂಜ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.