ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ

Advt_Headding_Middle
Advt_Headding_Middle


ಕರ್ನಾಟಕ ಉಚ್ಚ ನ್ಯಾಯಾಲಯವು ಪ್ರಸ್ತುತ ಇರುವ ಹಾಗೂ ಆನುಷಂಗಿಕ ಖಾಲಿ ಹುದ್ದೆಗಳೂ ಸೇರಿದಂತೆ ಸಿವಿಲ್ ನ್ಯಾಯಾಧೀಶರ ೯೪ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕನಿಷ್ಠ ವಿದ್ಯಾರ್ಹತೆ ಮತ್ತು ವಯೋಮಿತಿ:

(ಎ) ಭಾರತದಲ್ಲಿನ ಕಾನೂನಿನ ಮೂಲಕ ಸ್ಥಾಪಿತವಾದ ವಿಶ್ವವಿದ್ಯಾಲಯವು ನೀಡಿದ ಕಾನೂನು
ಪದವಿಯನ್ನು ಹೊಂದಿರಬೇಕು ಮತ್ತು ಕಡ್ಡಾಯವಾಗಿ ವಕೀಲರಾಗಿ ನೋಂದಣಿ ಆಗಿರಬೇಕು.
(ಬಿ) ಅಭ್ಯರ್ಥಿಗಳ ವಯಸ್ಸು, ಅರ್ಜಿಗಳನ್ನು ಸಲ್ಲಿಸುವುದಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕದಂದು, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳ ಸಂದರ್ಭದಲ್ಲಿ ೩೮ ವರ್ಷ ವಯಸ್ಸು ಮತ್ತು ಇತರರ ಸಂದರ್ಭದಲ್ಲಿ ೩೫ ವರ್ಷ ವಯಸ್ಸು ಮೀರಿರಬಾರದು.
(ಸಿ) ಮಾಜಿ-ಸೈನಿಕ ಅಭ್ಯರ್ಥಿಗಳಿಗಾಗಿ, ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆ ಇರುತ್ತದೆ.

ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲಿಲು ಕೊನೆಯ ದಿನಾಂಕ ೨೭/೦೪/೨೦೨೧ (ರಾತ್ರಿ ೧೧.೫೯ ಗಂಟೆ)
ಆನ್‌ಲೈನ್ ಮೂಲಕ ಶುಲ್ಕ ಸಂದಾಯ ಮಾಡಲು ಕೊನೆಯ ದಿನಾಂಕ ೩೦/೦೪/೨೦೨೧ (ರಾತ್ರಿ ೧೧.೫೯ ಗಂಟೆ)
ಚಲನ್ ಮೂಲಕ ಶುಲ್ಕ ಸಂದಾಯ ಮಾಡಲು ಕೊನೆಯ ದಿನಾಂಕ ೩೦/೦೪/೨೦೨೧ ಬ್ಯಾಂಕಿನ ಕೆಲಸದ ವೇಳೆಯವರೆಗೆ.
ಅರ್ಜಿ ಶುಲ್ಕ :
ಸಾಮಾನ್ಯ ಅಭ್ಯರ್ಥಿಯು ಮತ್ತು ಪ್ರವರ್ಗ ೨(ಎ)/೨(ಬಿ)/೩(ಎ)/೩(ಬಿ) ಅಭ್ಯರ್ಥಿಯು ರೂ. ೫೦೦/-(ರೂಪಾಯಿ ಐದುನೂರು ಮಾತ್ರ).
ಪ.ಜಾ/ಪ.ಪಂ/ ಪ್ರವರ್ಗ-೧ ಕ್ಕೆ ಸೇರಿದ ಅಭ್ಯರ್ಥಿಗಳು ರೂ. ೨೫೦/- (ರೂಪಾಯಿ ಇನ್ನೂರೈವತ್ತು ಮಾತ್ರ).

ನೇಮಕಾತಿ ವಿಧಾನ :- ಉಚ್ಚ ನ್ಯಾಯಾಲಯವು ಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ (ಮುಖ್ಯ ಲಿಖಿತ ಮತು
ಮೌಖಿಕ) ಪಡೆದ ಒಟು ಅಂಕಗಳ ಆಧಾರದ ಮೇಲೆ ನೇರ ನೇಮಕಾತಿಯನ್ನು ಮಾಡಲಾಗುತ್ತದೆ.
೧. ನೇರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯು ಮೂರು ಹಂತಗಳನ್ನು ಒಳಗೊಂಡಿದ್ದು, ಅವುಗಳೆಂದರೆ,
(ಎ) ಪೂರ್ವಭಾವಿ ಪರೀಕ್ಷೆ (ಬಿ) ಮುಖ್ಯ ಲಿಖಿತ ಪರೀಕ್ಷೆ ಮತ್ತು (ಸಿ) ಮೌಖಿಕ ಪರೀಕ್ಷೆಯಾಗಿರುತ್ತದೆ.
ಪೂರ್ವಭಾವಿ ಪರೀಕ್ಷೆಯ ಅಂಕಗಳನ್ನು ಮುಖ್ಯ ಲಿಖಿತ ಪರೀಕ್ಷೆಗೆ ಅರ್ಹತೆ ಹೆಂದಲು ಮಾತ್ರ ಪರಿಗಣಿಸಲಾಗುತ್ತದೆ.

ಹೆಚ್ಚಿನ ಮಾಹಿತಿ ಹಾಗೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸುದ್ದಿ ಕಚೇರಿಯನ್ನು ಸಂಪರ್ಕಿಸಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.