ಸರ್ಕಾರದ ಆದೇಶದನ್ವಯ ರದ್ದುಗೊಂಡ ಸರ್ಪ ಸಂಸ್ಕಾರ : ವ್ಯಗ್ರಗೊಂಡ ಸೇವಾರ್ಥಿಗಳು

Advt_Headding_Middle
Advt_Headding_Middle

 

ಸರ್ಕಾರದ ಆದೇಶದನ್ವಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ರದ್ದುಗೊಂಡು ವ್ಯಗ್ರಗೊಂಡ ಸೇವಾರ್ಥಿಗಳು ದೇವಸ್ಥಾನದ ಆಡಳಿತ ಕಛೇರಿ ಬಳಿ ಗಲಾಟೆ ಎಬ್ಬಿಸಿದ ಘಟನೆ ಎ.21  ರಂದು ಬೆಳಗ್ಗೆ ನಡೆದಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪಸಂಸ್ಕಾರದ ಸೇವಾರ್ಥಿ ಗಳು ಕೆಲವರು ಮೊದಲ ದಿನ ಬಂದಿದ್ದರೆ ಮತ್ತೆ ಕೆಲವರು ಬೆಳಗ್ಗೆ ಬಂದಿದ್ದರು. ಆದರೆ ಸರ್ಕಾರದ ನಿಯಮದಂತೆ ಸೇವೆಗಳನ್ನು ತಡೆಹಿಡಿಯಲಾಗಿತ್ತು. ಅಲ್ಲದೆ ಸರ್ಪಸಂಸ್ಕಾರ ಸೇವೆ ಎರಡು ದಿನ ನಡೆಯಲಿರುವುದರಿಂದ ಅದನ್ನು ತಡೆಹಿಡಿಯಲಾಗಿತ್ತು. ಇದ್ದರಿಂದ ಸೇವಾರ್ಥಿಗಳು ಆಡಳಿತ ಕಛೇರಿಯ ಬಳಿ ಬಂದು ಗಲಾಟೆ ಎಬ್ಬಿಸಿದ್ದಾರೆ. ಕೆಲವರು ತಮ್ಮ ಹಣ ಹಿಂತಿರುಗಿಸುವಂತೆ ಕೇಳಿಕೊಂಡರೆ ಮತ್ತೆ ಕೆಲವರು ಸೇವೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ ದೇವಸ್ಥಾನದ ಸಿಬ್ಬಂದಿಗಳು ಸಮಾದಾನಿಸಿದರೂ ಕೇಳದ ಭಕ್ತರನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಸಮಾಧಿನಿಸಿದ್ದಾರೆ ಒಂದು ಹಂತದಲ್ಲಿ ಸಮಾಧಾನಿಸಲು ಸಾದ್ಯವಾಗದಾಗ ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಅವರು ಬಂದು ಅವರನ್ನು ಸೈಲೆಂಟಾಗುವಂತೆ ಮಾಡಿದ್ದಾರೆ.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೊಹನ್ ರಾಮ್ ಸುಳ್ಳಿ ಜಿಲ್ಲಾಧಿಕಾರಿ ಅವರಿಗೆ ಮಾಹಿತಿ ನೀಡಿದ್ದು ಅವರ ಸೂಚನೆಯಂತೆ ಸರ್ಪ ಸಂಸ್ಕಾರ ದ ಹಣವನ್ನು ಚೆಕ್ ಮೂಲಕ ಹಿಂತಿರುಗಿಸುವುದು ಅಥವಾ ಮುಂದಿನ ದಿನಗಳಲ್ಲಿ ಪ್ರಥಮ ಆಧ್ಯತೆಯ ಮೇರೆಗೆ ಸೇವೆಗೆ ಅವಕಾಶ ಕಲ್ಪಿಸುವುದಾಗಿ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.