ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಚುನಾವಣೆ

Advt_Headding_Middle
Advt_Headding_Middle

 

ನಿರ್ದೇಶಕ ಸ್ಥಾನಕ್ಕೆ ಸುಳ್ಯದ ಮೂವರು ಪತ್ರಕರ್ತರು ಸ್ಪರ್ಧಿ

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ `ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ’ ನಿ, ಮಂಗಳೂರು ಇದರ ನೂತನ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಏ.27ರಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ಚುನಾವಣೆ ನಡೆಯಲಿದೆ.

 

 

ಒಟ್ಟು 15 ಸ್ಥಾನಗಳಲ್ಲಿ 9 ಸಾಮಾನ್ಯ ಸ್ಥಾನ ಇದ್ದು, 12 ಮಂದಿ ಕಣದಲ್ಲಿ ಉಳಿದಿದ್ದಾರೆ. ಮಂಡೆಕೋಲು ನಿವಾಸಿ, ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಪತ್ರಕರ್ತ ಆರ್.ಸಿ.ಭಟ್ ಹಾಗೂ ಸುದ್ದಿ ಬಿಡುಗಡೆಯ ಮಂಗಳೂರು ಪ್ರತಿನಿಧಿ, ಎಣ್ಮೂರು ನಿವಾಸಿ ಭಾಸ್ಕರ ರೈ ಕಟ್ಟ ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.

ಎರಡು ಎಸ್‍ಸಿ/ಎಸ್‍ಟಿ ಹಾಗೂ ಎರಡು ಸ್ಥಾನಗಳು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಿದೆ. ಈ ಸ್ಥಾನಗಳಿಗೆ ತಲಾ ಇಬ್ಬರು ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿರುವ ಕಾರಣ ಈ ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಲಿದೆ. ಸುಳ್ಯದ ಅಮರಪಡ್ನೂರು ಗ್ರಾಮದ ಮೋಟುಕಾನ ನಿವಾಸಿ, ವಿಜಯವಾಣಿ ಪತ್ರಿಕೆಯ ವರದಿಗಾರ ಹರೀಶ್ ಮೋಟುಕಾನ ಅವರು ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದ್ದು, ಘೋಷಣೆಯಷ್ಟೇ ಬಾಕಿ ಉಳಿದಿದೆ.

ಇನ್ನು ಹಿಂದುಳಿದ ವರ್ಗ ಪ್ರವರ್ಗ `ಎ’ ಮೀಸಲು ಅಡಿಯಲ್ಲಿ 2 ಸ್ಥಾನಕ್ಕೆ ಒಟ್ಟು 7 ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಏ.27ರಂದು ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಚುನಾವಣೆ ನಡೆಯಲಿದ್ದು, ಚುನಾವಣೆ ಬಳಿಕ ಮತೆಣಿಕೆ ಕಾರ್ಯ ನಡೆಯಲಿದೆ.

ಈ ಮೊದಲು ಏ.25ಕ್ಕೆ ಚುನಾವಣೆ ನಿಗದಿಯಾಗಿತ್ತು. ಆದರೆ ಅಂದು ಕೋವಿಡ್ 19 ಪೂರ್ಣ ಲಾಕ್ ಡೌನ್ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ಚುನಾವಣೆಯನ್ನು ಏ.27ಕ್ಕೆ ಮುಂದೂಡಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.