ಕೊಡಿಯಾಲ : ಅಕ್ರಮ ದನ ಸಾಗಾಟ – ಪ್ರಕರಣ ದಾಖಲು

Advt_Headding_Middle
Advt_Headding_Middle

 

 

ಕೊಡಿಯಾಲದಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ದನವನ್ನು ನಡೆಸಿಕೊಂಡು ಹೋಗುವಾಗ ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಗೆ ಅನುಮಾನ ಬಂದು ವಿಚಾರಿಸಿದಾಗ ದನ ನಡೆಸಿಕೊಂಡು ಹೋಗುವವ ದನವನ್ನು ಮರಕ್ಕೆ ಕಟ್ಟಿ ಹಾಕಿ ಓಡಿ ಹೋದ ಘಟನೆ ಎ.22 ರಂದು ನಡೆದಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಿಯಾಲದ ಕಲ್ಪಡ ಅಂಗಾರಡ್ಕ ಎಂಬಲ್ಲಿ ಸಂಜೆ ಹೊತ್ತು ದನದ ಕುತ್ತಿಗೆಗೆ ಹಗ್ಗ ಹಾಕಿ ದನವನ್ನು ನಡೆಸಿಕೊಂಡು ಹೋಗುತ್ತಿರುವಾಗ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿರುವ ಹರ್ಷನ್ ಕೆ.ಟಿ ಮತ್ತು ಸುಬ್ರಹ್ಮಣ್ಯ ಕೆ.ಎಂ.ರವರು ಜಾನುವಾರು ನಡೆಸಿಕೊಂಡು ಹೋಗುವವನನ್ನು ಕಂಡು ಸಂಶಯದಿಂದ ವಿಚಾರಿಸಿದರೆನ್ನಲಾಗಿದೆ.
ಆಗ ಜಾನುವಾರು ಕೊಂಡೋಗುವ ವ್ಯಕ್ತಿ ಸರಿಯಾದ ಉತ್ತರ ನೀಡದೆ ಇದ್ದು ಯಾವುದೇ ಪರವಾನಿಗೆ ಕೂಡ ಇಲ್ಲದೆ ಇರುವುದರಿಂದ ಹೆದರಿ ಜಾನುವಾರನ್ನು ಪಕ್ಕದ ಮರವೊಂದಕ್ಕೆ ಕಟ್ಟಿ ಹಾಕಿ ಸ್ಥಳದಿಂದ ಪರಾರಿಯಾದನೆನ್ನಲಾಗಿದೆ.
ಬಳಿಕ ಜಾನುವಾರಿನ ವಾರಿಸುದಾರರು ಹಾಗೂ ಅದನ್ನು ನಡೆಸಿಕೊಂಡು ಹೋಗುತ್ತಿದ್ದ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದು ಪೊಲೀಸು ದೂರು ನೀಡಿದ್ದು.
ಪೊಲೀಸರು ಸ್ಥಳಕ್ಕಾಗಮಿಸಿ ದನವನ್ನು ಠಾಣೆಗೆ ತಂದು ದನವನ್ನು ಮಾರಿದ ವೆಂಕಪ್ಪ ಗೌಡ ಕಲ್ಪಡ ಮತ್ತು ದನವನ್ನು ಕೊಂಡೋಗುತ್ತಿದ್ದ ಇಮ್ತಿಯಾಜ್ ಪಡ್ಪಿನಂಗಡಿ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.