ದುಗಲಡ್ಕದಲ್ಲಿ ಬೈಕ್‌ಗಳ ಢಿಕ್ಕಿ : ಸವಾರರಿಗೆ ಗಾಯ

Advt_Headding_Middle
Advt_Headding_Middle

ದುಗಲಡ್ಕ ಸಮೀಪ ಎರಡು ಬೈಕ್‌ಗಳು ಪರಸ್ಪರ ಢಿಕ್ಕಿ ಹೊಡೆದು ಸವಾರರು ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ.ದುಗಲಡ್ಕದಿಂದ ದೊಡ್ಡತೋಟದ ಕಡೆ ಹೋಗುತ್ತಿದ್ದ ಕೊಯಿಕುಳಿಯ ದಯಾನಂದ ಎಂಬವರ ಬೈಕ್ ಹಾಗೂ ಸಕಲೇಶಪುರದಿಂದ ಸುಳ್ಯದತ್ತ ಬರುತ್ತಿದ್ದ ವಿನಯ್ ಎಂಬವರು ಚಲಾಯಿಸುತ್ತಿದ್ದ ಬೈಕ್ ತಿರುವಿನಲ್ಲಿ ಪರಸ್ಪರ ಢಿಕ್ಕಿ ಹೊಡೆಯಿತು. ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆಯವರು ಮನೆಯಿಂದ ಸುಳ್ಯದತ್ತ ಬರುತ್ತಿದ್ದ ವೇಳೆ ಬೈಕ್ ಅಪಘಾತ ಸಂಭವಿಸಿ ಸವಾರರು ರಸ್ತೆಯಲ್ಲಿದ್ದರು. ಬೈಕ್‌ಗಳು ರಸ್ತೆಯಲ್ಲಿ ಬಿದ್ದಿತ್ತು. ಗಾಯಾಳುಗಳಿಂದ ಮಾಹಿತಿ ಪಡೆದ ಅವರು ಎರಡು ಗಾಯಾಳುಗಳ ಕಡೆಯವರನ್ನು ಸಂಪರ್ಕಿಸಿದರು. ಬಳಿಕ ಬಳಿಕ ದುಗಲಡ್ಕ, ಕಂದಡ್ಕದಿಂದ ಕೆಲವರು ಸ್ಥಳಕ್ಕೆ ಬಂದರು. ಗಂಗಾಧರ ಎಂಬವರು ರಿಕ್ಷಾದಲ್ಲಿ ದಯಾನಂದ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರು. ಗಾಯಾಳು ವಿನಯ್ ಅವರನ್ನು ದುರ್ಗಾಕುಮಾರ್‌ರವರು ತನ್ನ ಕಾರಿನಲ್ಲಿ ಕೆವಿಜಿ ಆಸ್ಪತ್ರೆಗೆ ಕೊಂಡೊಯ್ದರು. ದಯಾನಂದ ಅವರ ತಲೆಗೆ ಹಾಗೂ ವಿನಯ್‌ರವರ ಕೈಗೆ ಗಾಯವಾಗಿದ್ದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.