ಕೊರೋನಾ ಕರ್ಫ್ಯೂ ನಿಯಮಗಳನ್ನು ಒಪ್ಪಬೇಕಾದರೂ ಪ್ರಾರ್ಥನೆಗೆ ಅವಕಾಶ ಕಲ್ಪಿಸಿ : ಅಬ್ದುಲ್ ಲತೀಫ್ ಸಖಾಫಿ

Advt_Headding_Middle
Advt_Headding_Middle

ಕೊರೋನಾ ೨ನೇ ಅಲೆಯಿಂದಾಗಿ ಇದೀಗ ಸರಕಾರ ಬಹಳಷ್ಟು ಬಂದ್ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರ ನಿರ್ಮೂಲನೆಗಾಗಿ ಸರಕಾರದೊಂದಿಗೆ ಜನ ಸಾಮಾನ್ಯರು ಕೈ ಜೋಡಿಸುವುದು ಅನಿವಾರ್ಯವಾಗಿದೆ. ಬಂದ್ ಮಾರ್ಗ ಸೂಚಿಯಲ್ಲಿ ರಾಜ್ಯಾದ್ಯಂತ ಪ್ರಾರ್ಥನಾ ಮಂದಿರ ಒಳಪಟ್ಟದ್ದು ಸರಿಯೆನಿಸುವುದಿಲ್ಲ.
ಪ್ರತಿಯೊಂದು ಧರ್ಮಕ್ಕೂ ಪವಿತ್ರ ತಿಂಗಳು ದಿನಗಳಿದ್ದು ವೈವಿಧ್ಯ ಆರಾಧನೆ ಗಳಿಂದ ಅವುಗಳನ್ನು ಧನ್ಯಗೊಳಿಸುವುದು ಸಹಜ.ಇದೀಗ ಪವಿತ್ರ ರಂಝಾನ್ ಮುಸ್ಲಿಮರ ಪಾಲಿಗೆ ಅತ್ಯಂತ ಪುಣ್ಯ ಮಾಸ.ದೈನಂದಿನ ನಮಾಝ್ ಗಳನ್ನು ಮಸೀದಿಯಲ್ಲೇ ನಿರ್ವಹಿಸಲು ಉತ್ಸಾಹ ತೋರುತ್ತಾರೆ.ದುರದೃಷ್ಟಶಾತ್ ಈ ವರ್ಷವೂ ಅವಕಾಶ ವಂಚಿಸಲ್ಪಟ್ಟಿದೆ. ಸರಕಾರದ, ಆರೋಗ್ಯ ಇಲಾಖೆಯ ಎಲ್ಲಾ ನಿಯಮಗಳನ್ನು ಪಾಲಿಸಿ ವ್ಯವಸ್ಥಿತವಾಗಿ ಮಸೀದಿಗಳಲ್ಲಿ ನಮಾಝ್ ನಿರ್ವಹಿಸಲು ಆಯಾ ಜಮಾಅತ್ ಆಡಳಿತ ಮಂಡಳಿ ಹಾಗೂ ಜನರು ಅಗತ್ಯ ಕ್ರಮ ಕೈಗೊಳ್ಳಲು ಉತ್ಸುಕರಾಗಿರುವರು. ಈ ನಿಟ್ಟಿನಲ್ಲಿ ಸರಕಾರ ಪುನಃ ಪರಿಶೀಲಿಸಿ ಜನರ ಆರಾಧನಾ ಕರ್ಮಗಳಿಗೆ, ಪ್ರಾರ್ಥನೆಗಳಿಗೆ ಅವಕಾಶ ಕಲ್ಪಿಸಬೇಕು.

– ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ
ಪ್ರಧಾನ ಕಾರ್ಯದರ್ಶಿ ಎಸ್‌ಎಂಎ ಸುಳ್ಯ ರೀಜನಲ್

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.