ಸುಳ್ಯದಲ್ಲಿ ಬಾಕಿಯಾಗಿದ್ದ ವ್ಯಕ್ತಿಯನ್ನು ಸುದ್ದಿ ಸಹಾಯವಾಣಿ ಮೂಲಕಮನೆಗೆ ತಲುಪಿಸಿದ ಸುಳ್ಯ ನಗರ ಪಂಚಾಯತ್ ಸದಸ್ಯ ರಿಯಾಜ್

Advt_Headding_Middle
Advt_Headding_Middle

 

ಕೊರೊನಾ‌ ವಿಕೇಂಡ್ ಕರ್ಪ್ಯೂ ಕಾರಣದಿಂದ ಸುಳ್ಯ ನಗರದಲ್ಲಿ ಬಾಕಿಯಾಗಿದ್ದ ಕರಿಕೆ ವ್ಯಕ್ತಿಯೊಬ್ಬರನ್ನು ಸುದ್ದಿ ಸಹಾಯವಾಣಿ ಮೂಲಕ ತಿಳಿದು ನ.ಪಂ ಸದಸ್ಯ ರಿಯಾಜ್ ಕಟ್ಟೆಕ್ಕಾರ್ ಮನೆಗೆ ಬಿಟ್ಟು ಬಂದ ಘಟನೆ ವರದಿಯಾಗಿದೆ.

ಮಡಿಕೇರಿ ತಾಲೂಕು ಕರಿಕೆ ಪೊಂಗಾನ ರಾಜೇಂದ್ರ ಎಂಬವರು ಸುಳ್ಯ ಅರಂತೋಡು ಬಳಿ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದರು.
ಎ.24 ರಂದು ಬೆಳಿಗ್ಗೆ ಅರಂತೋಡಿನಿಂದ ಹೊರಟು ಸಂಜೆ ಯಾಗುವಾಗ ಒಂದು ವಾಹನದಲ್ಲಿ ಸುಳ್ಯಕ್ಕೆ ತಲುಪಿದರು.
ಸುಳ್ಯದಿಂದ ಅವರಿಗೆ ಕಲ್ಲಪಳ್ಳಿ ಕಡೆಗೆ ಯಾವುದೇ ವಾಹನ ಸಿಗದೆ ಸುಳ್ಯದ ಅಲೆಟ್ಟಿ ತಿರುವು ಬಳಿ ಇರುವ ಕಟ್ಟಡದಲ್ಲಿ ತಂಗಿದ್ದರು ಮರುದಿನ ಬೆಳಿಗ್ಗೆ ಯಾವುದಾದರೂ ವಾಹನ ಕಲ್ಲಪಳ್ಳಿ ಕಡೆಗೆ ಹೋಗುವ ವಾಹನ ಸಿಗಬಹುದು ಎಂದು ಕಾಯುತ್ತಿದ್ದರು.
ಬೆಳಿಗ್ಗೆ ವೀಕೆಂಡ್ ಕರ್ಪ್ಯೂ ವರದಿಗೆ ತೆರಳಿದ ಸುದ್ದಿ ಬಿಡುಗಡೆಯ ಸಿಬ್ಬಂದಿಗಳಿಗೆ ಮಾಹಿತಿ ಸಿಕ್ಕಿ ಸುಳ್ಯದಿಂದ ಊರಿಗೆ ತೆರಳಲು ವಾಹನ ವ್ಯವಸ್ಥೆಯಿಲ್ಲದೆ ಬಾಕಿಯಾಗಿರುವ ವ್ಯಕ್ತಿಯನ್ನು ಮಾತನಾಡಿಸಿ ಸುಳ್ಯ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್ ಅವರಿಗೆ ವಿಷಯ ತಿಳಿಸಿದರು.
ಸ್ಥಳಕ್ಕೆ ಅಗಮಿಸಿದ ರಿಯಾಜ್ ಅವರು ರಾಜೇಂದ್ರ ಅವರನ್ನು ಉಪಚರಿಸಿ ಅವರನ್ನು ಸ್ವತಹ ದ್ವಿಚಕ್ರ ವಾಹನದಲ್ಲಿ ಕರೆದೊಯ್ದು ಕಲ್ಲಪಳ್ಳಿ ಅಂಚೆ ಕಛೇರಿಯ ಬಳಿ ಬಿಟ್ಟು ಬಂದಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.