ಸ್ಥಬ್ದಗೊಂಡಿರುವ ಅಡ್ಕಾರು ಬಿ.ಎಸ್.ಎನ್.ಎಲ್. ಟವರ್

Advt_Headding_Middle
Advt_Headding_Middle

 

ವಿದ್ಯುತ್ ಇದ್ದರೂ ಕಾರ್ಯನಿರ್ವಹಿಸದ ಮೊಬೈಲ್ ಟವರ್ ಆಕ್ರೋಶ ವ್ಯಕ್ತಪಡಿಸುತ್ತಿರುವ ಗ್ರಾಹಕರು

ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿರುವ ಬಿ.ಎಸ್.ಎನ್.ಎಲ್. ಟವರ್ ಕಳೆದ ಮೂರು ದಿನಗಳಿಂದ ನೆಟ್ ವರ್ಕ್ ಸಿಗದೇ ಸ್ಥಬ್ದಗೊಂಡಿದ್ದು, ಲಾಕ್ ಡೌನ್ ಸಮಯದಲ್ಲಿ ಲಾಕ್ ಆಗಿದ್ದು, ತುರ್ತು ಅಗತ್ಯ ಸಂದರ್ಭದಲ್ಲಿ ಅಗತ್ಯವಾಗಿ ಬೇಕಿದ್ದ ಮೊಬೈಲ್ ನೆಟ್ ವರ್ಕ್ ಸಿಗದೇ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಡ್ಕಾರಿನಲ್ಲಿರುವ ಬಿ.ಎಸ್.ಎನ್. ಎಲ್. ಮೊಬೈಲ್ ಟವರ್ ಕಳೆದ ಕೆಲವು ವರ್ಷಗಳಿಂದ ವಿದ್ಯುತ್ ಇಲ್ಲದೇ ಇದ್ದರೆ ಮಾತ್ರ ನೆಟ್ ವರ್ಕ್ ಸಿಗದೇ ಇರುತ್ತಿತ್ತು. ಆದರೆ ಕಳೆದ ಮೂರು ದಿನಗಳಿಂದ ವಿದ್ಯುತ್ ಇದ್ದ ಸಂದರ್ಭದಲ್ಲಿಯೂ ನೆಟ್ ವರ್ಕ್ ಸಿಗದೇ ಇರುವುದರಿಂದ ಜನತೆ ಮತ್ತೆ ಹಿಡಿಶಾಪ ಹಾಕುತ್ತಿದ್ದಾರೆ.
ಕೊರೊನಾ ಕರ್ಪ್ಯೂ ಹಿನ್ನೆಲೆಯಲ್ಲಿ ಜನತಾ ಲಾಕ್ ಡೌನ್ ಘೋಷಣೆಯಾಗಿದ್ದು, ಜನರು ಮನೆಯಲ್ಲೇ ಇರುವ ಸಂದರ್ಭದಲ್ಲಿ ಅಗತ್ಯ ತುರ್ತು ಸಂದರ್ಭದಲ್ಲಿ ಫೋನ್ ಕರೆಗೆ ಬೇಕಿದ್ದ ಮೊಬೈಲ್ ನೆಟ್ ವರ್ಕ್ ಸಿಗದೇ ಇರುವುದರಿಂದ ಜನರಿಗೆ ಬಹಳಷ್ಟು ತೊಂದರೆಯಾಗುವಂತೆ ಆಗಿದೆ. ಆದ್ದರಿಂದ ಸಂಬಂಧಿಸಿದ ಇಲಾಖೆ ಇದರತ್ತ ಶೀಘ್ರ ಗಮನಹರಿಸಿ, ಟವರ್ ಚಾಲನೆಗೊಳ್ಳುವಂತೆ ಮಾಡಬೇಕಾಗಿದೆ.
ಬಹಳ ಹಿಂದಿನಿಂದಲೂ ಅದೆಷ್ಟೋ ಮಂದಿ ಗ್ರಾಹಕರು ಬಿ.ಎಸ್.ಎನ್.ಎಲ್. ಟವರನ್ನೇ ನೆಚ್ಚಿಕೊಂಡಿದ್ದು, ಬಿ.ಎಸ್.ಎನ್.ಎಲ್. ಇಲಾಖೆಯವರು ಇದರತ್ತ ಗಮನಹರಿಸಿ ಶೀಘ್ರವಾಗಿ ಟವರ್ ದುರಸ್ತಿ ಮಾಡಬೇಕಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.