ಪೆರುವಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

Advt_Headding_Middle
Advt_Headding_Middle

 

ಕೊರೊನಾ ಜಾಗೃತಿ ಮೂಡಿಸುವ ಕಾರ್ಯಕ್ಕೆ ಒತ್ತು

ಪೆರುವಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಎ.29 ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಎಲ್ಲರ ಸಹಕಾರ ಯಾಚಿಸಿ ಕೊರೊನಾ ದ ಬಗ್ಗೆ ನಾವೆಲ್ಲ ಕಟಿಬದ್ಧರಾಗಿ ಕೆಲಸ ನಿರ್ವಹಣೆ ಮಾಡುವ, ಇದಕ್ಕೆ ಆಯಾ ವಾರ್ಡ್ ಸದಸ್ಯರು ಹೆಚ್ಚಿನ ಮುತುವರ್ಜಿ ವಹಿಸಲು ಮನವಿ ಮಾಡಿದರು.
ಸಭೆಯಲ್ಲಿ ವಿಶೇಷವಾಗಿ ಕೊರೊನ ದ ಬಗ್ಗೆ ಜನತೆ ಜಾಗ್ರತೆ ವಹಿಸಲು ಕರಪತ್ರ, ಧ್ವನಿವರ್ಧಕ ದ ಮೂಲಕ ಜನತೆಗೆ ಮುಂಜಾಗ್ರತೆ ವಹಿಸಲು ಕಾರ್ಯಕ್ರಮ ರೂಪಿಸಲು ಇಂದಿನ ಸಭೆಯ ಪ್ರಮುಖ ನಿರ್ಧಾರಗಳಾದವು. ತೆರಿಗೆ ಪರಿಷ್ಕರಣೆ, ಸಿಬ್ಬಂದಿ ವರ್ಗ ದವರ ವೇತನ, ಉದ್ಯೋಗ ಖಾತರಿ ಯೋಜನೆ ಗಳ ವಿಸ್ತ್ರತ ಚರ್ಚೆ ನಡೆಯಿತು.ತೆರಿಗೆ ಸಂಗ್ರಹದಲ್ಲಿ ಶೇಕಡಾ ನೂರರ ಗುರಿ ಸಾಧಿಸಲು ಕಾರಣಿಕರ್ತರಾದ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸಲಾಯಿತು. ಕೊರೊನಾ ಜಾಗೃತಿ ಬಗ್ಗೆ ಮಾಹಿತಿ ಫಲಕವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಚಂದ್ರಾವತಿ, ಸದಸ್ಯ ರಾದ ಸಚಿನ್ ರಾಜ್ ಶೆಟ್ಟಿ, ಪದ್ಮನಾಭ ಶೆಟ್ಟಿ, ಮಾಧವ, ಶ್ರೀಮತಿ ಶಹಿನಾಜ್, ಶ್ರೀಮತಿ ಗುಲಾಬಿ, ಶ್ರೀಮತಿ ರೇವತಿ ಹಾಗೂ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿ ಯವರು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ ಸ್ವಾಗತಿಸಿದರು.
ಶ್ರೀಮತಿ ಜಯಲಕ್ಷ್ಮಿ ಪ್ರಾರ್ಥಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.