ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಮುಖ್ಯ ಶಿಕ್ಷಕ ಸೇರ ಕೋಟಿಯಪ್ಪ ಪೂಜಾರಿ ಇಂದು ಸ್ವಯಂ ನಿವೃತ್ತಿ

Advt_Headding_Middle
Advt_Headding_Middle

ಸುಳ್ಯ ಗಾಂಧಿನಗರ ಕೆಪಿಎಸ್‌ನ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾಗಿದ್ದ ಸೇರ ಕೋಟಿಯಪ್ಪ ಪೂಜಾರಿಯವರು ತಮ್ಮ ವೈಯಕ್ತಿಕ ನೆಲೆಯಲ್ಲಿ ಇಂದು ಸ್ವಯಂ ನಿವೃತ್ತಿ ಪಡೆದು, ನಿವೃತ್ತಿ ಹೊಂದಿದ್ದಾರೆ. ಮೂಲತಃ ಬಂಟ್ವಾಳ ತಾಲೂಕು ಬರಿಮಾರು ಗ್ರಾಮದ ಮಾಣಿಗೆ ಸಮೀಪದ ಸೇರ ಸುಂದರ ಪೂಜಾರಿ ಹಾಗೂ ಅಬ್ಬಕ್ಕು ಪೂಜಾರ್‍ತಿಯವರ ಪುತ್ರರಾಗಿರುವ ಕೋಟಿಯಪ್ಪ ಪೂಜಾರಿಯವರು ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಮಾಣಿಯಲ್ಲಿ , ಪದವಿ ಪೂರ್ವ ಶಿಕ್ಷಣವನ್ನು ಪುತ್ತೂರು ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನಲ್ಲಿ, ಪದವಿ ಶಿಕ್ಷಣವನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ , ಬಿ.ಎಡ್ ಶಿಕ್ಷಣವನ್ನು ಮಂಗಳೂರು ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪಡೆದ ನಂತರ ರಾಜ್ಯ ಶಾಸ್ತ್ರದಲ್ಲಿ ಎಂ.ಎ ಪದವಿಯನ್ನು ಕೊಣಾಜೆ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಪೂರೈಸಿರುತ್ತಾರೆ. ೧೯೯೪ರಲ್ಲಿ ಸುಳ್ಯ ತಾಲೂಕಿನ ಏನೆಕಲ್ ಪ್ರೌಢ ಶಾಲೆಗೆ ಶಿಕ್ಷಕರಾಗಿ ನೇಮಕಗೊಂಡರು. ನಂತರ ೨೦೦೨ರಿಂದ ಪುತ್ತೂರು ಸ.ಪ.ಪೂ ಕಾಲೇಜಿನಲ್ಲಿ ೧೩ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ೨೦೧೫ರಲ್ಲಿ ಸುಳ್ಯ ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಮುಖ್ಯ ಶಿಕ್ಷಕರಾಗಿ ಬಂದ ಇವರು ಕೆಲಕಾಲ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಿಕ್ಷಣ ಸಂಯೋಜಕರಾಗಿ ಕರ್ತವ್ಯ ನಿರ್ವಹಿಸಿದರು.
ಶಿಕ್ಷಣ ಇಲಾಖೆಯವರು ನಡೆಸುವ ಪ್ರತಿಭಾ ಕಾರಂಜಿಯಲ್ಲಿ,ಯುವಜನ ಮೇಳಗಳಲ್ಲಿ ತೀರ್ಪುಗಾರರಾಗಿಯೂ ಸೇವೆ ಸಲ್ಲಿಸಿದ್ದ ಇವರ ಅನೇಕ ಲೇಖನಗಳು,ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸುಮಾರು ೨೭ ವರ್ಷದ ಸೇವಾ ಅನುಭವ ಹೊಂದಿರುತ್ತಾರೆ. ಸುಳ್ಯ ತಾಲೂಕಿನಲ್ಲಿ ವೃತ್ತಿ ಜೀವನ ಪ್ರಾರಂಭಿಸಿ, ಸುಳ್ಯ ತಾಲೂಕಿನಲ್ಲಿಯೇ ನಿವೃತ್ತಿಯಾಗಿರುವುದು ವಿಶೇಷ. ಶಾಲಾ ಮಟ್ಟದ ಉತ್ತಮ ಗ್ರಾಹಕ ಕ್ಲಬ್ ರಚನೆಗಾಗಿ ದ.ಕ.ಜಿಲ್ಲಾಡಳಿತ ಹಾಗೂ ದ.ಕ. ಜಿಲ್ಲಾ ಗ್ರಾಹಕರ ಸಂಘಟನೆ ಒಕ್ಕೂಟ (ರಿ.)ಮಂಗಳೂರು ಇವರಿಂದ ಸತತ ೭ ಬಾರಿ ಉತ್ತಮ ಸಂಯೋಜಕ ಶಿಕ್ಷಕ ಪ್ರಶಸ್ತಿ, ಪ್ರತಿಷ್ಠಿತ ಡಾ.ಎಸ್.ರಾಧಾಕೃಷ್ಣನ್ ರಾಜ್ಯ ಶಿಕ್ಷಕ ಪ್ರಶಸ್ತಿ, ಬೆಂಗಳೂರಿನ ಜ್ಞಾನಮಂದಾರ ಅಕಾಡೆಮಿಯವರು ನೀಡಿದ ಸಮಾಜರತ್ನ ಪುರಸ್ಕಾರ, ಸೇರಿದಂತೆ ತನ್ನ ಶೈಕ್ಷಣಿಕ ಸಾಧನೆಗಾಗಿ ಅನೇಕ ಸನ್ಮಾನ ಪ್ರಶಸ್ತಿಗಳು ಇವರಿಗೆ ಲಭಿಸಿವೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.