ಸರಕಾರಿ ನೌಕರರಿಗೆ ಬಸ್ ಸೌಲಭ್ಯ

Advt_Headding_Middle
Advt_Headding_Middle

ಈಗಾಗಲೇ ಪುತ್ತೂರಿನಿಂದ ಸುಳ್ಯಕ್ಕೆ  ಆರಂಭ

ಸುಳ್ಯದಿಂದ ಪುತ್ತೂರಿಗೆ ಸೋಮವಾರದಿಂದ ಆರಂಭ

     ಕೊರೋನ ಕರ್ಫ್ಯೂ ನಿಂದಾಗಿ ಅಂಗಡಿ ಮುಂಗಟ್ಟುಗಳೆಲ್ಲ ಬಂದ್ ಆಗಿದೆ. ಬಸ್ ಸಂಚಾರ ಸ್ಥಗಿತಗೊಂಡಿದೆ. ಆದರೆ ಸರಕಾರಿ ಕಚೇರಿಗಳು ತೆರೆದಿರುತ್ತವೆ. ಸರಕಾರಿ ನೌಕರರು ಕಚೇರಿಗೆ ಹಾಜರಾಗಬೇಕು. ಸಾರ್ವಜನಿಕರ ಕೆಲಸ ಇಲ್ಲದಿದ್ದರೆ ಕೋವಿಡ್ ಕೆಲಸ ಅವರಿಗಾಗಿ ಕಾದಿರುತ್ತದೆ. ಇಂತಹ ಸರಕಾರಿ ನೌಕರರು ಪುತ್ತೂರು ಮಂಗಳೂರಿನಿಂದ  ಬರಬೇಕಾದರೆ ಬಸ್ ವ್ಯವಸ್ಥೆ ಬೇಕೆಂದು ಮನಗಂಡು, ಪುತ್ತೂರು- ಮಂಗಳೂರು ಮಧ್ಯೆ ಬೆಳಿಗ್ಗೆ ಒಂದು ಟ್ರಿಪ್ – ಸಂಜೆ ಒಂದು ಟ್ರಿಪ್    ಕೆ.ಎಸ್.ಆರ್.ಟಿ.ಸಿ. ಬಸ್ ಓಡಿಸಲು ಗುರುವಾರದಿಂದ ಆರಂಭಿಸಲಾಗಿದೆ.
ಅದೇ ರೀತಿ ಸುಳ್ಯದಿಂದ ಪುತ್ತೂರಿ ಕಡೆಗೆ ಹೋಗುವವರಿಗೂ ಒಂದು ಟ್ರಿಪ್ ಬಸ್ ಓಡಿಸಲು ಕೆ ಎಸ್ ಆರ್ ಟಿ ಸಿ ನಿರ್ಧರಿಸಿದೆ. ಮೇ. 3 ಸೋಮವಾರದಿಂದ  ಬೆಳಿಗ್ಗೆ 8.45 ಕ್ಕೆ ಸುಳ್ಯ ಬಸ್ ನಿಲ್ದಾಣದಿಂದ  ಬಸ್ ಪುತ್ತೂರಿಗೆ ಹೊರಡುತ್ತದೆ. ಸಂಜೆ 5.15 ಕ್ಕೆ ಪುತ್ತೂರು ಬಸ್ ನಿಲ್ದಾಣದಿಂದ ಸುಳ್ಯದ ಕಡೆಗೆ ಬಸ್ ಹೊರಡುತ್ತದೆ. ಸರಕಾರಿ ನೌಕರರ ಜತೆಗೆ ಕರ್ಫ್ಯೂ ಸಂದರ್ಭ ಕಾರ್ಯನಿರ್ವಹಿಸಬಹುದಾದ ಕಟ್ಟಡ ಕಾರ್ಮಿಕರೂ ಸೇರಿದಂತೆ ಇತರರು ಈ ಬಸ್ ನಲ್ಲಿ ಪ್ರಯಾಣಿಸಬಹುದು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.