ಇಂದು ವ್ಯವಸ್ಥಿತವಾಗಿ ನಡೆಯುತ್ತಿರುವ ಲಸಿಕೆ ವಿತರಣೆ

Advt_Headding_Middle
Advt_Headding_Middle

ಶಾಸಕರ ವಾರ್ ರೂಂ ಕಾರ್ಯಕರ್ತರಿಂದ ಸ್ವಯಂ ಸೇವೆ

ಸುಳ್ಯದ ಕೆವಿಜಿ ಪುರಭವನದಲ್ಲಿ ನಿನ್ನೆಯಿಂದ ಆರಂಭಗೊಂಡಿರುವ ಲಸಿಕೆ ವಿತರಣಾ ಕಾರ್ಯ ಎರಡನೇ ದಿನವಾದ ಇಂದು ವ್ಯವಸ್ಥಿತವಾಗಿ ನಡೆಯುತ್ತಿದೆ. ನಿನ್ನೆ ಹೆಚ್ಚು ಜನ ಬಂದುದರಿಂದ ಮತ್ತು ಇಂಟರ್‌ನೆಟ್ ನಿಧಾನಗತಿಯಲ್ಲಿದ್ದುದರಿಂದ ಗೊಂದಲ ಏರ್ಪಟ್ಟಿತ್ತು. ಈ ಗೊಂದಲದ ನಿವಾರಣೆಗೆ ಜನಪ್ರತಿನಿಧಿಗಳು ಮತ್ತು ಶಾಸಕರ ವಾರ್ ರೂಂ ಕಾರ್ಯಕರ್ತರು ಶ್ರಮಿಸಿದ್ದರು.
ಇಂದು ಸುಧಾರಿತ ಆಪನ್ನು ಸರಕಾರ ಜಾರಿಗೊಳಿಸಿದ್ದರಿಂದ ಸರ್ವರ್ ವೇಗವಾಗಿದೆ. ಅದಲ್ಲದೆ ಶಾಸಕರ ವಾರ್ ರೂಂ ಕಾರ್ಯಕರ್ತರು ಲಸಿಕಾ ಕೇಂದ್ರದ ಪೂರ್ಣ ಜವಾಬ್ದಾರಿ ವಹಿಸಿಕೊಂಡು ಸುವ್ಯವಸ್ಥಿತವಾಗಿ ಲಸಿಕಾ ಕಾರ್ಯ ನಡೆಯುವಂತೆ ಆರೋಗ್ಯ ಕಾರ್ಯಕರ್ತರಿಗೆ ನೆರವಾಗುತ್ತಿದ್ದಾರೆ.
ಇಂದು ಪುರಭವನದ ಲಸಿಕಾ ಕೇಂದ್ರದಲ್ಲಿ ಜನರ ರಶ್ ಇಲ್ಲ. ಬಂದವರಿಗೆ ಕೂಪನ್ ನೀಡಿ ಸಮಯ ನಿಗದಿಪಡಿಸಿರುವುದರಿಂದ ಆ ಹೊತ್ತಿಗೆ ಜನರು ಬಂದು ವ್ಯಾಕ್ಸಿನ್ ಪಡೆಯುತ್ತಿದ್ದಾರೆ. ಇದರಿಂದಾಗಿ ಲಸಿಕೆ ವಿತರಣಾ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.