ಜಾಲ್ಸೂರು ಎಲ್ಲೈಸಿ ವಿಮಾಗ್ರಾಮವಾಗಿ ಘೋಷಣೆ

Advt_Headding_Middle
Advt_Headding_Middle

2020-21ನೇ ಆರ್ಥಿಕ ವರ್ಷದಲ್ಲಿ ಜಾಲ್ಸೂರು ಗ್ರಾಮವನ್ನು ಎಲ್ಲೈಸಿಯ ವಿಮಾ ಗ್ರಾಮವಾಗಿ ಘೋಷಿಸಲಾಗಿದೆ.
ಭಾರತೀಯ ಜೀವ ವಿಮಾ ನಿಗಮದ ಸಾಮಾಜಿಕ ಪರಿಕಲ್ಪನೆ ವಿಮಾಗ್ರಾಮ, ಹತ್ತು ಸಾವಿರ ಜನಸಂಖ್ಯೆಗಿಂತ ಕಡಿಮೆಯಿದ್ದು, ಒಂದು ಆರ್ಥಿಕ ವರ್ಷದಲ್ಲಿ ನಿಬಂಧನೆಗಳಿಗೆ ಒಳಪಟ್ಟು ಹೊಸ ವ್ಯವಹಾರವನ್ನು ಪೂರೈಸಿದರೆ ಆ ಗ್ರಾಮವನ್ನು ವಿಮಾ ಗ್ರಾಮವೆಂದು ಘೋಷಿಸಲಾಗುತ್ತದೆ. ಕನಿಷ್ಠ ಇಪ್ಪತ್ತೈದು ಸಾವಿರದಿಂದ ಗರಿಷ್ಠ ಒಂದು ಲಕ್ಷದವರೆಗೆ ಕೊಡುವ ಅನುದಾನದಿಂದ ಸಾರ್ವಜನಿಕ ಉಪಯೋಗಕ್ಕೆ ಈ ಅನುದಾನವನ್ನು ಬಳಸಬೇಕಾಗುತ್ತದೆ.
ಅದರಂತೆ 2019-20ನೇ ಆರ್ಥಿಕ ವರ್ಷದಲ್ಲಿ ಜಾಲ್ಸೂರು ಗ್ರಾಮದ ಸೋಣಂಗೇರಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಎಪ್ಪತ್ತೈದು ಸಾವಿರ ಅನುದಾನದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಪ್ರಸ್ತುತ 2020-21ನೇ ಆರ್ಥಿಕ ವರ್ಷದಲ್ಲಿ ಜಾಲ್ಸೂರು ಗ್ರಾಮದ ಅಡ್ಕಾರು ಅಂಜನಾದ್ರಿಯ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನದ ಸಾರ್ವಜನಿಕ ಕಾಮಗಾರಿಗೆ ರೂ. ಒಂದು ಲಕ್ಷ ಅನುದಾನ ನೀಡಲಾಗಿದೆ.
ವಿಮಾ ಗ್ರಾಮ ಯೋಜನೆಯ ಅನುದಾನವನ್ನು ಬಿಡುಗಡೆಗೊಳಿಸಿ ಮಂಜೂರು ಮಾಡುವಲ್ಲಿ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿ ಮಾಧವ ಜಾಲ್ಸೂರು ಅವರು ಶ್ರಮವಹಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.