ಐವರ್ನಾಡು ಸೊಸೈಟಿಯಿಂದ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಮಾದರಿ ಸೇವೆ

Advt_Headding_Middle
Advt_Headding_Middle

 

ಸದಸ್ಯರ ಸಾಲಕ್ಕೆ ಶೆ.2 ಬಡ್ಡಿ ರಿಯಾಯಿತಿ

 

ಕೊರೋನಾ ಲಾಕ್ ಡೌನ್ ಸಂಕಷ್ಟದಿಂದ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಗ್ರಾಮೀಣ ಪ್ರದೇಶದಿಂದ ಹಿಡಿದು ನಗರ ಪ್ರದೇಶದವರೆಗೆ ಎಲ್ಲರೂ ಆರ್ಥಿಕ ಸಂಕಷ್ಟ, ಅಸಹಾಯಕತೆಯಿಂದ ಬಳಲಿದ್ದಾರೆ. ಇಂತಹಾ ಸಂದಿಗ್ಧ ಪರಿಸ್ಥಿತಿಯಲ್ಲಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತಮ್ಮ ಗ್ರಾಮದ ಜನರ ನೆರವಿಗೆ ನಿಂತಿದೆ. ಸತತ ಎರಡನೇ ವರುಷವೂ ಕೊರೋನಾ ಕಾಲಘಟ್ಟದಲ್ಲಿ ಜನರೆಡೆಗೆ ಸಹಾಯ ಹಸ್ತವನ್ನು ಚಾಚಿದೆ. ಕೊರೋನಾ ಕಾಲ ಘಟ್ಟದಲ್ಲಿ ಜನರಿಗೆ ನೆರವಾಗಲು ಸಂಘದ ಆಡಳಿತ ಮಂಡಳಿ ಕೆಲವೊಂದು ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಸಂಘದ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದಿದ್ದು ಕೊರೋನಾ ಪಾಸಿಟಿವ್ ಇರುವಂತ ವ್ಯಕ್ತಿಗಳಿಗೆ ಸಂಘದಿಂದ ಎಲ್ಲಾ ರೀತಿಯ ಸಹಾಯವನ್ನು ನೀಡಲಾಗುವುದು. ಬಿಪಿಎಲ್ ಮತ್ತು ಅಂತ್ಯೋದಯ ವಂಚಿತ ಆರ್ಥಿಕ ಹಿಂದುಳಿದ ಕಡು ಬಡವ ಕುಟುಂಬಗಳಿಗೆ ಸಂಘದ ವತಿಯಿಂದ ಆಹಾರ ಸಾಮಾಗ್ರಿಗಳನ್ನು ಒದಗಿಸಲಾಗುವುದು. ಅಲ್ಲದೆ 3.01.05.2021 ರಿಂದ 31.08.2021 ರವರೆಗೆ ( 3 ತಿಂಗಳ ಅವಧಿಗೆ)ಸಂಘದ ಗ್ರಾಹಕ ಸಾಲಕ್ಕೆ ಶೇ.2 ಬಡ್ಡಿ ರಿಯಾಯಿತಿ ನೀಡಲಾಗುವುದು. ಹಿರಿಯ ನಾಗರಿಕರು ಮತ್ತು ಅಸಹಾಯಕರು ಈ ದೂರವಾಣಿ ಸಂಖ್ಯೆಗೆ (9480761203) ಕರೆ ಮಾಡಿದಲ್ಲಿ ತಮ್ಮ ಮನೆಗೆ ಸಂಘದ ಎಲ್ಲಾ ಸೇವೆಯನ್ನು ನೀಡಲಾಗುವುದು.( ಬೆಳಿಗ್ಗೆ ಗಂಟೆ 9.30 ರಿಂದ ಮಧ್ಯಾಹ್ನ 1.00 ರವರೆಗೆ) ಎಂದು ಐವರ್ನಾಡು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ಹಾಗು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಚೆಮ್ನೂರು ತಿಳಿಸಿದ್ದಾರೆ.

ಕಳೆದ ವರುಷವೂ ಲಾಕ್ ಡೌನ್ ಸಂದರ್ಭದಲ್ಲಿ ಸಹಕಾರ ಸಂಘ ನಡೆಸಿದ ಸೇವೆ ಜನ‌ಮೆಚ್ಚುಗೆಗೆ ಪಾತ್ರವಾಗಿತ್ತು. ಕಳೆದ ವರ್ಷದ ಲಾಕ್ ಡೌನ್ ಸಂದರ್ಭದಲ್ಲಿ ಪಡಿತರವನ್ನು, ಕಡಿಮೆ ಬೆಲೆಯಲ್ಲಿ ತರಕಾರಿಯನ್ನು‌ ಗ್ರಾಮದ ಮನೆ ಮನೆಗೆ ತಲುಪಿಸುವ ಕಾರ್ಯ ನಡೆಸಲಾಗಿತ್ತು.ಕಡು ಬಡವರಿಗೆ, ಅಸಹಾಯಕರಿಗೆ ಉಚಿತವಾಗಿ ಅಹಾರ ಸಾಮಾಗ್ರಿಗಳನ್ನು ವಿತರಿಸಿದ್ದರು. ಸೊಸೈಟಿಯ ಸ್ಟೋರ್ ನಲ್ಲಿ ಜಿನಸಿ ವಸ್ತುಗಳನ್ನು ಸಾಕಷ್ಟು ಶೇಖರಿಸಿ ಗ್ರಾಮದ ಜನರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅವಶ್ಯಕ ವಸ್ತುಗಳನ್ನು ಪೂರೈಸಲಾಗಿತ್ತು. ಅತೀ ಕಡಿಮೆ ದರದಲ್ಲಿ ತರಕಾರಿ,ಜನ ವಸತಿ ಪ್ರದೇಶಗಳಿಗೆ ಪಡಿತರ ಸಾಮಾಗ್ರಿಗಳನ್ನು ಪೂರೈಸುವುದರ ಜೊತೆಗೆ ಪಡಿತರ ಕಾರ್ಡ್ ಇಲ್ಲದ ಹಾಗೂ ತೀರ ಅವಶ್ಯಕತೆ ಇರುವ ಗ್ರಾಮದ ಜನರಿಗೆ ಆಹಾರ ಕಿಟ್ ಗಳನ್ನು ನೀಡಲಾಗಿತ್ತು. ಗ್ರಾಮದ ಜನರ ಆರ್ಥಿಕ ಅವಶ್ಯಕತೆ ಪೂರೈಸುವ ದೃಷ್ಟಿಯಿಂದ ಕೊಕ್ಕೂ ಮತ್ತು ಗೇರು ಬೀಜಿ ಖರೀದಿ ಮಾಡಲಾಗಿತ್ತು. ಆ ಮೂಲಕ ಸಂಕಷ್ಟದ ಸಂದರ್ಭದಲ್ಲಿ ಸಹಕಾರಿ ಸಂಘ ಜನರ ಜೊತೆಗೆ ಇರುತ್ತದೆ ಅನ್ನುವ ಸಂದೇಶವನ್ನು ನೀಡಿತ್ತು.
ಒಟ್ಟಿನಲ್ಲಿ ಜನ ಜೀವನದ ಭಾಗವಾಗಿರುವ ಸಹಕಾರ ಕ್ಷೇತ್ರ ಮತ್ತು ಗ್ರಾಮದ ಜೀವನಾಡಿಯಾಗಿರುವ ಸಹಕಾರಿ ಸಂಸ್ಥೆ ಜನರ ಸಂಕಷ್ಟದ ಸಮಯದಲ್ಲಿ ಸಹಾಯ ಹಸ್ತವನ್ನು ನೀಡುವ ಮೂಲಕ
ಮಾದರಿಯಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.