ಬೆಳ್ಳಾರೆ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ

Advt_Headding_Middle
Advt_Headding_Middle

 

ಪರ್ಮನೆಂಟ್ ವೈದ್ಯರ ನೇಮಕಕ್ಕೆ ಜಿಲ್ಲಾಧಿಕಾರಿಯವರಿಗೆ ಮನವಿ

ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಂ.ಬಿ.ಬಿ.ಎಸ್ ವೈದ್ಯರ ನೇಮಕ ಮಾಡಬೇಕೆಂದು ಜಿಲ್ಲಾಧಿಕಾರಿ ಮತ್ತು ಡಿ.ಎಚ್.ಒ ರವರಿಗೆ ಮನವಿ ನೀಡಲಾಯಿತು.
ಸುಳ್ಯ ತಾಲೂಕಿನಲ್ಲಿ ಎರಡನೇ ದೊಡ್ಡ ಪಟ್ಟಣವಾದ ಬೆಳ್ಳಾರೆಯ ಆರೋಗ್ಯ ಕೇಂದ್ರದಲ್ಲಿ ಸರಿಯಾದ ವೈದ್ಯರಿಲ್ಲದೆ ಜನರಿಗೆ ತುಂಬಾ ತೊಂದರೆಯಾಗುತ್ತಿದ್ದು ರಾತ್ರಿ ಸಮಯದಲ್ಲಿ ಇಲ್ಲಿ ವೈದ್ಯರಿಲ್ಲ.
ಬಡವರಿಗೆ ತುಂಬಾ ಕಷ್ಟಕರವಾಗಿದೆ.
ರಾತ್ರಿ ವಾಸ್ತವ್ಯ ಮಾಡುವ ಎಂ.ಬಿ.ಬಿ.ಎಸ್. ವೈದ್ಯರನ್ನು ತಕ್ಷಣ ನೇಮಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ದ.ಕ.ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು ಇದರ ಅಧ್ಯಕ್ಷ ಚಂದ್ರ ಕೋಲ್ಚಾರು, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಆರ್.ಕೆ.ಭಟ್ ಕುರುಂಬುಡೇಲು, ಪ್ರೇಮಚಂದ್ರ ಪ್ರೇಮ್ ಸ್ಟುಡಿಯೋ , ವಸಂತ ಉಲ್ಲಾಸ್ ,ಮಾಧವ ತಡಗಜೆ ಉಪಸ್ಥಿತರಿದ್ದು ಮನವಿ ನೀಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.