ಸುಳ್ಯ ಸರಕಾರಿ ಆಸ್ಪತ್ರೆಯ ಸಂಕಷ್ಟಕ್ಕೆ ಡಿ.ಸಿ. ಸ್ಪಂದನೆ

Advt_Headding_Middle
Advt_Headding_Middle

 

ಡಯಾಲಿಸಿಸ್ ಮೆಶಿನ್ ಖರೀದಿಸಲು ಸ್ಥಳದಲ್ಲೇ ಅಪ್ರೂವಲ್ ಕೊಟ್ಟ ಜಿಲ್ಲಾಧಿಕಾರಿ

ಸುಳ್ಯ ಸರಕಾರಿ ತಾಲೂಕು ಆಸ್ಪತ್ರೆಗೆ ಹೆಚ್ಚುವರಿಯಾಗಿ ಅಗತ್ಯವಾಗಿದ್ದ ಡಯಾಲಿಸಿಸ್ ಮೆಶಿನ್ ಗಳನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅನುದಾನದಿಂದ ಖರೀದಿಸಲು ಆಸ್ಪತ್ರೆಯಲ್ಲೇ ಅಪ್ರೂವಲ್ ನೀಡಿ ದ.ಕ.ಜಿಲ್ಲಾಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ.
ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ 4 ಡಯಾಲಿಸಿಸ್ ಯಂತ್ರಗಳಿವೆ. ಅವುಗಳಲ್ಲಿ ಒಂದು ಹಾಳಾಗಿದ್ದು, ಮೂರು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ತಾಲೂಕು ಕೇಂದ್ರದ ಈ ಸರಕಾರಿ ಆಸ್ಪತ್ರೆಯಲ್ಲಿ ಈಗ ಒಟ್ಟು 37 ಮಂದಿ ಬಡ ರೋಗಿಗಳು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದು ಇನ್ನೂ 13 ಮಂದಿ ವೈಟಿಂಗ್ ಲೀಸ್ಟ್ ನಲ್ಲಿದ್ದಾರೆ. ಅದಕ್ಕಾಗಿ ಕನಿಷ್ಟ 2 ಡಯಾಲಿಸಿಸ್ ಯಂತ್ರಗಳು ಹೆಚ್ಚುವರಿಯಾಗಿ ಬೇಕಾಗಿದ್ದವು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಾರ್ವಜನಿಕ ಉಪಯೋಗಕ್ಕಾಗಿ ವಿನಿಯೋಗ ಮಾಡಬಹುದಾದ ನಿಧಿಯಿಂದ 4 ಡಯಾಲಿಸಿಸ್ ಯಂತ್ರ ಖರೀದಿಸಲು ಶಾಸಕ ಅಂಗಾರರು ಸೂಚನೆ ನೀಡಿದ್ದ ಮೇರೆಗೆ ಪ್ರಸ್ತಾವನೆ ಸಿದ್ಧಗೊಂಡಿತ್ತಾದರೂ ಅದಕ್ಕೆ ಜಿಲ್ಲಾಧಿಕಾರಿಗಳ ಅಪ್ರೂವಲ್ ಆಗಿರಲಿಲ್ಲ.
ಮೇ.1 ರಂದು ಉಸ್ತುವಾರಿ ಸಚಿವರ ಜತೆಗೆ ಕೋವಿಡ್ ಮೀಟಿಂಗ್ ಗಾಗಿ ಸುಳ್ಯಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ರವರು ಸಭೆಯ ಬಳಿಕ ಸುಳ್ಯ ಸರಕಾರಿ ಆಸ್ಪತ್ರೆಗೆ ಪರಿಶೀಲನೆಗಾಗಿ ಬಂದಿದ್ದಾಗ ಸುದ್ದಿಯ ವರದಿಗಾರರು ಡಯಾಲಿಸಿಸ್ ಯಂತ್ರದ ಕುರಿತು ಜಿಲ್ಲಾಧಿಕಾರಿಗಳ ಗಮನ ಸೆಳೆದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ರವರು ವೈದ್ಯಾಧಿಕಾರಿ ಡಾ.ಕರುಣಾಕರ ಕೆ.ವಿ. ಯವರೊಂದಿಗೆ ಆ ಬಗ್ಗೆ ವಿಚಾರಿಸಿದರು. ಬಳಿಕ ಸುಬ್ರಹ್ಮಣ್ಯ ದೇವಳದ ಕಾರ್ಯನಿರ್ವಹಣಾಧಿಕಾರಿಯವರಿಗೆ ಫೋನ್ ಮಾಡಿ , ಆ ಪ್ರಸ್ತಾವನೆ ಕುರಿತು ತಿಳಿದುಕೊಂಡರು.
ಆ ಬಳಿಕ ವೈದ್ಯಾಧಿಕಾರಿಯ ಮೂಲಕ ಅದರ ಕಡತ ತರಿಸಿದ ಜಿಲ್ಲಾಧಿಕಾರಿಗಳು ಕಾರಿನ ಬಾನೆಟ್ ಮೇಲೆ ಕಡತವನ್ನು ತೆರೆದಿಟ್ಟು ಓದಿ ಅಲ್ಲೇ ಸಹಿ ಹಾಕಿದರು.
ಇನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದವರು ಇ ಟೆಂಡರ್ ಕರೆದು ಡಯಾಲಿಸಿಸ್ ಮೆಶಿನ್ ಖರೀದಿಸಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕೊಡಬೇಕಾಗುತ್ತದೆಂದು ತಿಳಿದುಬಂದಿದೆ.

4 ಡಯಾಲಿಸಿಸ್ ಮೆಶಿನ್ ಬರಲಿದೆ
ಸುಳ್ಯ ಸರಕಾರಿ ಆಸ್ಪತ್ರೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ 4 ಡಯಾಲಿಸಿಸ್ ಮೆಶಿನ್ ಒದಗಿಸಲು ಇಪ್ಪತ್ತಾರೂವರೆ ಲಕ್ಷ ರೂ. ಮೀಸಲಿಡಲಾಗಿದೆ. ಒಂದು ಯಂತ್ರಕ್ಕೆ 6 ಲಕ್ಷ 62 ಸಾವಿರ ರೂ. ವಿನಿಯೋಗಿಸಲಾಗುವುದೆಂದು ತಿಳಿದು ಬಂದಿದೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.