ಆಲೆಟ್ಟಿ: ನಾರ್ಕೋಡುನಲ್ಲಿ ಮೇಯಲು ಹೋದ ಐದು ದನಗಳು ಕಾಣೆ

Advt_Headding_Middle
Advt_Headding_Middle

 

ಆಲೆಟ್ಟಿಯ ನಾರ್ಕೋಡು ಅಚ್ಚುತ ಮಾಸ್ತರ್ ರವರು ಮೇಯಲು ಬಿಟ್ಟಿರುವ ಐದು ದನಗಳು ಕಾಣೆಯಾಗಿರುವ ಘಟನೆ ವರದಿಯಾಗಿದೆ. ಪ್ರತಿ ದಿನ ಮೇಯಲು ಬಿಡುತ್ತಿರುವ ದನಗಳು ಸಂಜೆಯಾಗುತ್ತಲೆ ಹಟ್ಟಿಗೆ ಬಂದು ಸೇರುತ್ತಿತ್ತು. ಕಳೆದ 3 ದಿನದ ಹಿಂದೆ ಹಟ್ಟಿಯಿಂದ ಬಿಟ್ಟ ದನಗಳು ಬಾರದೇ ಇದ್ದುದರಿಂದ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಇನ್ನೂ ಪತ್ತೆಯಾಗಿಲ್ಲ . ಮೇಯಲು ಹೋದ ದನಗಳನ್ನು ದನ ಕಳ್ಳರು ಕದ್ದೋಯ್ದಿರಬಹುದೇ ಅಥವಾ ಬೇರೆಯವರ ತೋಟಕ್ಕೆ ಹೋದ ಅವುಗಳನ್ನು ಕಟ್ಟಿ ಹಾಕಿರಬಹುದೇ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಹಬ್ಬುತ್ತಿದೆ. ಒಟ್ಟಾರೆಯಾಗಿ ಇತ್ತೀಚಿನ ದಿನಗಳಲ್ಲಿ ದನಗಳು ಕಾಣೆಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ಜನತೆಯನ್ನು ಆತಂಕಕ್ಕೀಡು ಮಾಡುತ್ತಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.