ಎಪಿಎಂಸಿ ಅಧ್ಯಕ್ಷರಿಗೆ ಕೊರೋನಾ ಪಾಸಿಟಿವ್

Advt_Headding_Middle
Advt_Headding_Middle


ಸುಳ್ಯ ಎಪಿಎಂಸಿ ಅಧ್ಯಕ್ಷ ವಿನಯ್‌ಕುಮಾರ್ ಮುಳುಗಾಡುರಿಗೆ ಕೊರೋನಾ ಪಾಸಿಟಿವ್ ಬಂದಿರುವುದಾಗಿ ತಿಳಿದುಬಂದಿದೆ. ಕೆಲ ದಿನಗಳ ಹಿಂದೆ ಎಪಿಎಂಸಿ ಸಹಾಯಕ ಕಾರ್ಯದರ್ಶಿಯವರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಸಹಾಯಕ ಕಾರ್ಯದರ್ಶಿಯವರು ಎಪಿಎಂಸಿ ಸಭೆಯಲ್ಲಿಯೂ ಭಾಗವಹಿಸಿದ್ದಾರೆಂದು ಇದರಿಂದ ಆ ಸಭೆಯಲ್ಲಿದ್ದ ಎಲ್ಲರಿಗೂ ಕೊರೋನಾ ಟೆಸ್ಟ್ ಮಾಡಲಾಗಿತ್ತು. ಇದೀಗ ಆರೋಗ್ಯ ಇಲಾಖೆ ವರದಿ ನೀಡಿದ್ದು, ಎಪಿಎಂಸಿ ಅಧ್ಯಕ್ಷ ವಿನಯರಿಗೆ ಪಾಸಿಟಿವ್ ಇರುವುದಾಗಿ ಗೊತ್ತಾಗಿದೆ.

 

ನಾನು ಆರೋಗ್ಯವಾಗಿದ್ದೇನೆ : ಕೊರೋನಾ ಪಾಸಿಟಿವ್ ಬಂದಿರುವ ಎಪಿಎಂಸಿ ಅಧ್ಯಕ್ಷರ ಆರೋಗ್ಯವನ್ನು ವಿಚಾರಿಸಿದಾಗ ನಮ್ಮ ಸಹಾಯಕ ಕಾರ್ಯದರ್ಶಿಯವರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ನಮ್ಮ ಸಭೆಯಲ್ಲಿ ಅವರು ಭಾಗವಹಿಸಿದ್ದರಿಂದ ನಾವೆಲ್ಲರೂ ಟೆಸ್ಟ್ ಮಾಡಿಸಿಕೊಂಡೆವು. ಅದರಲ್ಲಿ ನನ್ನ ವರದಿ ಪಾಸಿಟಿವ್ ಬಂದಿದೆ. ಆದರೆ ನನಗೆ ಕೊರೋನಾದ ಯಾವುದೇ ಲಕ್ಷಣಗಳಿಲ್ಲ. ನಾನು ಆರೋಗ್ಯವಾಗಿದ್ದೇನೆ. ಮನೆಯಲ್ಲೇ ಐಸೋಲೇಶನ್ ಆಗಿದ್ದೇನೆ ಎಂದು ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.