Breaking News

ಕಲ್ಮಡ್ಕ ಗ್ರಾಮ ಪಂಚಾಯತ್ ನಲ್ಲಿ ಕೋವಿಡ್ ಟಾಸ್ಕ್ ಫೋರ್ಸ್ ಕಾರ್ಯಪಡೆ ಸಮಿತಿ ಸಭೆ

Advt_Headding_Middle

 

 

ಕಲ್ಮಡ್ಕ ಗ್ರಾಮ ಪಂಚಾಯತ್ ನಲ್ಲಿ ಟಾಸ್ಕ್ ಫೋರ್ಸ್‌ ಸಮಿತಿಯ ಸಭೆಯು ಮೇ. 17ರಂದು ಅಧ್ಯಕ್ಷರಾದ ಶ್ರೀಮತಿ ಹಾಜಿರಾ ಗಫೂರ್ ರವರ ಅಧಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಈ ಕೆಳಗಿನ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ರೇಷನ್ ಕಾರ್ಡ್ ಇಲ್ಲದ 11 ಬಡ ಕುಟುಂಬಗಳಿಗೆ ಗ್ರಾಮ ಪಂಚಾಯತ್ ವತಿಯಿಂದ ಅಕ್ಕಿಯನ್ನು ವಿತರಿಸಲು ತೀರ್ಮಾನಿಸಲಾಯಿತು. ಕೋವಿಡ್ ತುರ್ತು ಕೆಲಸಗಳಿಗೆ ವಾಹನವನ್ನು ಬಾಡಿಗೆಗೆ ಪಡೆಯುವ ಬಗ್ಗೆ ಸಭೆಯಲ್ಲಿ ಚರ್ಚಿಸಿದಾಗ ಕಾರ್ಯಪಡೆ ಸದಸ್ಯರಾದ ಶ್ರೀ ರಜಿತ್ ಭಟ್ ಪಂಜದಬೀಡು ಇವರು ಉಚಿತವಾಗಿ ವಾಹನ ನೀಡುವುದಾಗಿ ಘೋಷಿಸಿದರು ಸದ್ರಿ ವಾಹನದ ಇಂಧನದ ಖರ್ಚನ್ನು ಗ್ರಾಮ ಪಂಚಾಯತ್ ನಿಂದ ಭರಿಸಲು ತೀರ್ಮಾನಿಸಲಾಯಿತು.
ಗ್ರಾಮ ಪಂಚಾಯತ್ ಮತ್ತು ಕಾರ್ಯಪಡೆ ಉಪಾಧ್ಯಕ್ಷರಾದ ಶ್ರೀ ಮಹೇಶ್ ಕುಮಾರ್ ಕರಿಕ್ಕಳ ರವರು ಪಂಬೆತ್ತಾಡಿ ಗ್ರಾಮಕ್ಕೆ ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರ ಸಂಚಾರಕ್ಕಾಗಿ ಒಂದು ತಿಂಗಳ ಅವಧಿಗೆ ತನ್ನ ಸ್ವಂತ ಖರ್ಚಿನಿಂದ ಒಂದು ಆಟೋ ರಿಕ್ಷಾವನ್ನು ನೀಡುವುದಾಗಿ ಘೋಷಿಸಿರುತ್ತಾರೆ.ಮೇ. 5 ರಂದು ಪಂಬೆತ್ತಾಡಿ ಗ್ರಾಮದಲ್ಲಿ 20 ಜನರನ್ನು RTPCR ಟೆಸ್ಟ್ ಮಾಡಿದ್ದು ಆ ಪೈಕೆ 5 ಜನರ ರಿಪೋರ್ಟ್‌ ಬಂದಿದ್ದು ಉಳಿದವರ ಟೆಸ್ಟ್ ಮಾಹಿತಿ ಬರದೇ ಇರುವ ಕಾರಣ ಮೇಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತೀರ್ಮಾನಿಸಲಾಯಿತು. ಪಾಸಿಟಿವ್ ಬಂದವರಿಗೆ ಗ್ರಾಮ ಪಂಚಾಯತ್ ವತಿಯಿಂದ ಸ್ಯಾನಿಟೈಸರ್ ಮತ್ತು ಸೋಪನ್ನು ಹಾಗೂ ವೈದ್ಯರ ಸಲಹೆಯನ್ನು ಪಡೆದುಕೊಂಡು ಅಗತ್ಯವುಲ್ಲವರಿಗೆ ಡೋಲೋ 650 tablet ನ್ನು ಟಾಸ್ಕ್ ಫೋರ್ಸ್‌ ಸಮಿತಿಯ ಮೂಲಕ ವಿತರಿಸಲು ತೀರ್ಮಾನಿಸಲಾಯಿತು.
ಪಾಸಿಟಿವ್ ಬಂದ ಕುಟುಂಬಗಳಿಗೆ ಟಾಸ್ಕ್ ಫೋರ್ಸ್ ಸಮಿತಿಯ ಮೂಲಕ ನ್ಯಾಯ ಬೆಲೆ ಅಂಗಡಿಯಿಂದ ಪಡಿತರ ಅಕ್ಕಿಯನ್ನು ಅವರ ಮನೆ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಯಿತು.
ಪಡ್ಪಿನಂಗಡಿ ನ್ಯಾಯ ಬೆಲೆ ಅಂಗಡಿಯಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದ ಕಾರಣದಿಂದ ಗ್ರಾಮ ಪಂಚಾಯತ್ ಕಛೇರಿಯಲ್ಲಿ ನ್ಯಾಯ ಬೆಲೆ ಅಂಗಡಿಯ ಸಿಬ್ಬಂದಿಗಳನ್ನು ಬಳಸಿಕೊಂಡು ಸುಮಾರು 65 ಕುಟುಂಬಗಳಿಗೆ ಈ ದಿನ ಪಡಿತರ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಯಿತು ಮುಂದೆ ಈ ರೀತಿಯ ಸಮಸ್ಯೆಯಾದಾಗ ಇದೇ ರೀತಿಯ ವ್ಯವಸ್ಥೆ ಮಾಡುವುದಾಗಿ ತೀರ್ಮಾನಿಸಲಾಯಿತು.
ಪಾಸಿಟಿವ್ ಪ್ರಕರಣ ಹೆಚ್ಚಾಗದಂತೆ ವಾರ್ಡ್ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು ಈ ಸಮಿತಿಯು ಜಾಗೃತಿ ಮೂಡಿಸುವ ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು ಮತ್ತು ಮಾಸ್ಕ್ ನ್ನು ಕಡ್ಡಾವಾಗಿ ಬಳಸುವಂತೆ ಪ್ರರೇಪಿಸಲು ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ಉಪಾಧ್ಯಕ್ಷರಾದ ಮಹೇಶ್ ಕುಮಾರ್ ಕರಿಕ್ಕಳ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಸಿ.ವಿ, ಟಾಸ್ಕ್ ಫೋರ್ಸ್ ಸದಸ್ಯರಾದ ಶ್ರೀಮತಿ ಮೋಹಿನಿ,  ಅಬ್ದುಲ್ ಗಫೂರ್, ಶ್ರೀಮತಿ ಮೀನಾಕ್ಷಿ, ಶ್ರೀಮತಿ ಪವಿತ್ರಾ ಕುಧ್ವ,  ರಜಿತ್ ಭಟ್ ,  ತೀರ್ಥಾನಂದ ಕೊಡಂಕೆರಿ,  ಇಸ್ಮಾಯಿಲ್ ಪಡ್ಪಿನಂಗಡಿ, ಶ್ರೀ ವಿನೋದ್ ಮಾಳಪ್ಪಮಕ್ಕಿ, ಗ್ರಾಮ ಲೆಕ್ಕಾಧಿಕಾರಿ ಶಿವಾಜಿ, ANM ಗಳಾದ ಶ್ರೀಮತಿ ರೇಣುಕಾ ಮತ್ತು ಶ್ರೀಮತಿ ಪವಿತ್ರ ಹಾಗೂ ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಧಮಯಂತಿ, ಶ್ರೀಮತಿ ಯಮುನಾ, ಶ್ರೀಮತಿ ಚಂದ್ರಾವತಿ, ಗ್ರಾ.ಪಂ ಕಾರ್ಯದರ್ಶಿ  ಗೋಪಾಲಕೃಷ್ಣ ಕೆ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.