ಪಂಜ :  ಬಿದ್ದು ಸಿಕ್ಕ ಕರಿಮಣಿ ಸರ ವಾರೀಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ

Advt_Headding_Middle

 

 

ಪಂಜದ ವಿಜಯ ಕ್ಲಿನಿಕ್ ಎದುರು ಕೂತ್ಕುಂಜ ಗ್ರಾಮದ ಸಂಪ ನಿವಾಸಿ,ಪಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಶಾಂತರಾಮ ಸಂಕಡ್ಕ ಮತ್ತು ಐವತ್ತೊಕ್ಲು ಗ್ರಾಮದ ಕೆಮ್ಮೂರು ಶಶಿಕುಮಾರ್ ರವರಿಗೆ ಮೇ.17 .ರಂದು. 5 ಪವನ್ ತೂಕದ ಚಿನ್ನದ ಕರಿಮಣಿ ಸರ ಬಿದ್ದು
ಸಿಕ್ಕಿತ್ತು .ಸರ ಮಣ್ಣಿನಲ್ಲಿ ಮುಳುಗಿದ್ದರಿಂದ ಶಾಂತರಾಮ ಸಂಕಡ್ಕರವರು ಮನೆಗೆ ತಂದು ತೊಳೆದು ಪರೀಕ್ಷಿಸಿದಾಗ ಅದರಲ್ಲಿ 916 ಬರೆದಿತ್ತು. ಆದರಿಂದ ಅದು ಚಿನ್ನದ ಸರ ಎಂದು ಅವರಿಗೆ ಗ್ಯಾರೆಂಟಿಯಾಯಿತು. ಇದೇ ವೇಳೆ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಮತ್ತು ವಾಟ್ಸಾಪ್ ಗ್ರೂಪ್ ಗಳಲ್ಲಿ ಚಿನ್ನ ಕಳೆದು ಹೋಗಿರುವ ಪ್ರಕಟಣೆ ಗಮನಿಸಿ ಅವರು ಚಿನ್ನದ ವಾರಿಸುದಾರನ್ನು ಸಂಪರ್ಕಿಸಿ ಮಾಹಿತಿ ನೀಡಿದರು.

ಮೇ.19.ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ಸಮೀಪ ಚಿನ್ನದ ವಾರಿಸುದಾರರಾದ ಏನೆಕಲ್ಲು ಗ್ರಾಮದ ಅಮೈ ಶ್ರೀಮತಿ ಜಲಜಾಕ್ಷಿ ಮತ್ತು ಮೋಹನಚಂದ್ರ ರವರಿಗೆ ಶಾಂತರಾಮ ಸಂಕಡ್ಕ ಮತ್ತು ಶಶಿಕುಮಾರ್ ಕೆಮ್ಮೂರು ಚಿನ್ನವನ್ನು ಹಸ್ತಾಂತರಿಸಿ ಪ್ರಾಮಾಣಿಕತೆಯಿಂದ ಮೆರೆದಿದ್ದಾರೆ.ಈ ಸಂದರ್ಭ ಪಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯ ರವಿ ಬಿ ನಾಗತೀರ್ಥ, ಸುದ್ದಿಬಿಡುಗಡೆ ಪತ್ರಿಕೆ ಏಜೆಂಟರ್ ಲಿಂಗಪ್ಪ ಗೌಡ ನಾಗತೀರ್ಥ, ತೀರ್ಥಪ್ರಸಾದ್ ಪಲ್ಲತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.ಮೇ.13.ರಂದು
ಶ್ರೀಮತಿ ಜಲಜಾಕ್ಷಿ ಮತ್ತು ಮೋಹನಚಂದ್ರ ಪಂಜದ ವಿಜಯ ಕ್ಲಿನಿಕ್ ಚಿಕಿತ್ಸೆಗಾಗಿ ಬಂದಿದ್ದರು ಇದೇ ವೇಳೆ ಚಿನ್ನ ಬಿದ್ದುಹೋಗಿತ್ತು. ಬಳಿಕ ಪಂಜದಿಂದ ಏನೆಕಲ್ಲು ತನಕ
ಬಹಳಷ್ಟು ಹುಡುಕಾಟ ನಡೆಸಿದ್ದರು. ಈ ಕುರಿತು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ಕೂಡ ನೀಡಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.