ಕೋವಿಡ್ ಸಂದರ್ಭ ಅರಂತೋಡು – ತೊಡಿಕಾನ ಸಹಕಾರ ಸಂಘ ಮಹತ್ವದ ಹೆಜ್ಜೆ

Advt_Headding_Middle

 

ಸಾಲ ಮರುಪಾವತಿ ಅವಧಿ ಜುಲೈ 31 ರವರೆಗೆ ಮುಂದೂಡಿಕೆ

ರಸಗೊಬ್ಬರ, ಕೃಷಿ ಉಪಕರಣ ಖರೀದಿಗೆ ನಿಬಡ್ಡಿ ಸಾಲ ನೀಡಲು ನಿರ್ಧಾರ

ರಾಜ್ಯದಾದ್ಯಂತ ಕೊರೋನಾ ಹೆಚ್ಚುತ್ತಿದ್ದು, ಸುಳ್ಯದಲ್ಲಿಯೂ ಅದರ ಪ್ರಭಾವ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಅರಂತೋಡು ತೊಡಿಕಾನ ಸಹಕಾರ ಸಂಘ ಮಹತ್ವದ ಹೆಜ್ಜೆ ಇರಿಸಿದೆ.
ಕೋವಿಡ್ – 19 ಕಾರಣದಿಂದ ಸಂಕಷ್ಟದಲ್ಲಿರುವ ಸಂಘದ ಸದಸ್ಯರ ಹಿತದೃಷ್ಟಿಯಿಂದ ಸದಸ್ಯರಿಗೆ ವಿತರಿಸಿರುವ ಕೃಷಿಯೇತರ ಸಾಲಗಳಾದ ವಾಹನ ಖರೀದಿ ಸಾಲ, ವೈಯುಕ್ತಿಕ ಸಾಲ, ಅಲ್ಪಾವಧಿ, ದೀರ್ಘಾವಧಿ ಮತ್ತು ಮಧ್ಯಮಾವಧಿ ಕೃಷಿಯೇತರ ಸಾಲಗಳ ಮರು ಪಾವತಿ ಅವಧಿಯನ್ನು ಜುಲೈ ೩೧ರ ವರೆಗೆ ಮುಂದೂಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ಪ್ರಕಟಿಸಿದರು. ಅಲ್ಲದೆ ಅರ್ಹ ರೈತ ಸದಸ್ಯರಿಗೆ ರಸಗೊಬ್ಬರ ಖರೀದಿ, ಕೃಷಿ ಮತ್ತು ರಬ್ಬರ್ ಉಪಕರಣಗಳ ಖರೀದಿಗೆ ೪೫ ದಿನಗಳಿಗೆ ನಿಬಡ್ಡಿ ಸಾಲ ನಂತರ ತಿಂಗಳಿಗೆ ಶೇ ೧%ರ ಬಡ್ಡಿದರದಲ್ಲಿ ಸಾಲ ವಿತರಣೆಗೆ ಕೂಡ ತೀರ್ಮಾನಿಸಲಾಗಿದೆ ಎಂದರು. ಕ್ಯಾಂಪ್ಕೋ ಸಹಕಾರದೊಂದಿಗೆ ನಿಯಮಕ್ಕೆ ಒಳಪಟ್ಟು ಪ್ರತೀ ಮಂಗಳವಾರ ಕೊಕ್ಕೋ ಖರೀದಿ ಹಾಗು ಗುರುವಾರ ಅಡಿಕೆ ಖರೀದಿಯನ್ನು ನಡೆಸಲಾಗುತ್ತದೆ. ಈಗಾಗಲೇ ಸಾಮಾಜಿಕ ಅಂತರವನ್ನು ಕಾಪಾಡುವ ಸಲುವಾಗಿ ಸರಕಾರದ ನಿಯಮಾನುಸಾರ ಬೈಲುವಾರು ಪಡಿತರ ವಿತರಣೆ ಮಾಡಲಾಗಿದೆ. ಕಂಟೈನ್ ಮೆಂಟ್ ವಲಯದಲ್ಲಿರುವ ಪಡಿತರ ಚಿಟಿದಾರರಿಗೆ ಪಡಿತರವನ್ನು ಒಟಿಪಿ ಮೂಲಕ ಮನೆಮನೆಗೆ ಅರಂತೋಡು ಗ್ರಾಮ ಪಂಚಾಯತ್ ನೆರವಿನೊಂದಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.
ಕೃಷಿಯೇತರ ಸಾಲಗಳ ಮರುಪಾವತಿ ಅವಧಿ ಜುಲೈ ೩೧ರ ವರೆಗೆ ಮುಂದೂಡಿಕೆ, ರಸಗೊಬ್ಬರ,ಕೃಷಿ ಮತ್ತು ರಬ್ಬರ್ ಉಪಕರಣಗಳ ಖರೀದಿಗೆ ನಿಬಡ್ಡಿ ದರದಲ್ಲಿ ಸಾಲ ವಿತರಣೆಗೆ ನಿರ್ಣಯ, ಕ್ಯಾಂಪ್ಕೋ ಸಹಕಾರದೊಂದಿಗೆ ನಿಯಮಕ್ಕೆ ಒಳಪಟ್ಟು ಪ್ರತಿ ಮಂಗಳವಾರ ಕೊಕ್ಕೋ, ಗುರುವಾರ ಅಡಿಕೆ ಖರೀದಿ, ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಬೈಲುವಾರು ಪಡಿತರ ವಿತರಣೆ, ಕಂಟೈನ್ ಮೆಂಟ್ ವಲದಲ್ಲಿರುವ ಪಡಿತರ ಚೀಟಿದಾರರಿಗೆ ಒಟಿಪಿ ಮೂಲಕ ಮನೆ ಮನೆಗೆ ಪಡಿತರ ವಿತರಣೆ, ಕೋವಿಡ್-೧೯ ಕಾರಣದಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸದಸ್ಯರಿಗೆ ನೆರವನ್ನು ನೀಡುವ ಸಲುವಾಗಿ ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರು ತುರ್ತು ಸಭೆ ಸೇರಿ ಸದಸ್ಯ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಲುವಾಗಿ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಕರ್ನಾಟಕ ರಾಜ್ಯ ಸರಕಾರವು ರೈತರು ಮತ್ತು ಸ್ವಸಹಾಯ ಸಂಘಗಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಭೂ ಅಭಿವೃದ್ಧಿ ಬ್ಯಾಂಕ್ ಗಳಿಂದ ಪಡೆದಿರುವ ಸಣ್ಣ, ಮಧ್ಯಮ ಮತ್ತು ದೀರ್ಘಾವಧಿ ಸಾಲಗಳ ಮರುಪಾವತಿ ಅವಧಿಯನ್ನು ಜುಲೈ ೩೧ರ ವರೆಗೆ ವಿಸ್ತರಿಸಿ ರೈತರ ನೆರವಿಗೆ ಧಾವಿಸಿರುವ ಮುಖ್ಯಮಂತ್ರಿ ಸನ್ಮಾನ್ಯ ಬಿ. ಎಸ್. ಯಡಿಯೂರಪ್ಪ ಅವರನ್ನು ಸಂಘದ ಆಡಳಿತ ಮಂಡಳಿಯ ಪರವಾಗಿ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಿಗೆ ನೆರವು ನೀಡುವ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಯಿತು.
ಈ ಸದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ದಯಾನಂದ ಕುರುಂಜಿ, ವಿನೋದ್ ಉಳುವಾರು, ಚಂದ್ರಶೇಖರ ಚೋಡಿಪಣೆ, ಕುಸುಮಾಧರ ಅಡ್ಕಬಳೆ, ಸಂ,ತೋಷ್ ಚಿಟ್ಟನ್ನೂರು, ನಿಧೀಶ್ ಅರಂತೋಡು, ಸೋಮಯ್ಯ, ಭಾರತಿ ಪಿಂಡಿಮನೆ, ಚಿತ್ರಾ ಶಶಿಧರ ದೇರಾಜೆ, ಗಣೇಶ್ ಕರಿಂಬಿ, ಕೇಶವ ಅಡ್ತಲೆ, ವಿಜೇತ್ ಮರುವಳ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.