Breaking News

ಬೆಂಗಳೂರಿನಲ್ಲಿ ಕೊರೋನಾ ವಾರಿಯರ್ ಆಗಿರುವ ರಮ್ಯಾ ಕೆ. ಪಿ. ಯವರಿಗೆ ಬಿಬಿಎಂಪಿ ಪ್ರಶಂಸಾ ಪತ್ರ

Advt_Headding_Middle

 

ಬೃಹನ್ ಬೆಂಗಳೂರು ಮಹಾನಗರ ಪಾಲಿಕೆ ದಕ್ಷಿಣ ವಲಯದಲ್ಲಿ ಸಾರ್ವಜನಿಕರ ಆರೋಗ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಕೊರೋನಾ ನಿಯಂತ್ರಣ ಕಾರ್ಯದಲ್ಲಿ ಕೊರೋನಾ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸುಳ್ಯದ ಶ್ರೀಮತಿ ರಮ್ಯಾ ಕೆ.ಪಿ. ಯವರಿಗೆ ಬಿಬಿಎಂಪಿ ದಕ್ಷಿಣ ವಲಯಕ್ಕೆ ಸಂಬಂಧಿಸಿದ 169  – ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವತಿಯಿಂದ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ.
“ಹಗಲಿರುಳು ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಸದಾ ಸಾರ್ವಜನಿಕರು ಸೇವೆಗೆ ಸಿದ್ಧರಾಗಿರುವ ನಿಮ್ಮ ಮನೋಭಾವ ಶ್ಲಾಘನೀಯವಾಗಿದೆ” ಎಂದು ಪ್ರಶಂಸೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರಮ್ಯಾ ಕೆ.ಪಿ. ಯವರು ಅರಂತೋಡಿನ ಸಾಮಾಜಿಕ ಧುರೀಣ ಕೆ.ಆರ್. ಪದ್ಮನಾಭ – ರೂಪಾ ದಂಪತಿಯ ಪುತ್ರಿಯಾಗಿದ್ದು, ಸುಳ್ಯದ ಬಲದೇವ್ ಗ್ರ್ಯಾನೈಟ್ಸ್ ನ ಸಂತೋಷ್ ಊರುಬೈಲು ರವರ ಪತ್ನಿ. ಬೆಂಗಳೂರಿನ ಎನ್. ಎಸ್.ವಿ.ಕೆ. ಪಾಲಿಟೆಕ್ನಿಕ್ ನಲ್ಲಿ ಉದ್ಯೋಗಿಯಾಗಿರುವ ಅವರು ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನಾ ವಾರಿಯರ್ ಆಗಿ ವಿಶೇಷ ಕರ್ತವ್ಯದಲ್ಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.