Breaking News

ಐವರ್ನಾಡು ಗ್ರಾಮ ಪಂಚಾಯತ್ ಘನತ್ಯಾಜ್ಯ ಘಟಕ

Advt_Headding_Middle

 

ಶುಚಿಗೊಳಿಸಿದ ಒಣಕಸ ಮಂಗಳೂರಿನ ರೀಸೈಕ್ಲಿಂಗ್ ಇಂಡಸ್ಟ್ರೀಗೆ ಸಾಗಾಟ

ಐವರ್ನಾಡು ಗ್ರಾಮ ಪಂಚಾಯತ್ ಘನತ್ಯಾಜ್ಯ ಘಟಕದಿಂದ ಶುಚಿಗೊಳಿಸಿದ ಒಣಕಸವನ್ನು ಮಂಗಳೂರಿನ ನೇಚರ್ ಫ್ರೆಂಡ್ಲಿ ರೀಸೈಕ್ಲ್ ಇಂಡಸ್ಟ್ರೀಸ್ ಮತ್ತು ಡ್ರೈ ವೇಸ್ಟ್ ಆ್ಯಂಡಲಿಂಗ್ ಗೆ ಸಾಗಾಟ ಮಾಡಲಾಯಿತು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಹನದ ಮೂಲಕ ಸಂಗ್ರಹಿಸಿದ ಒಣಕಸವನ್ನು ಘನತ್ಯಾಜ್ಯ ಘಟಕದಲ್ಲಿ ಸಂಗ್ರಹಿಸಿಡಲಾಗಿದ್ದು, ಅಲ್ಲಿ ಶುಚಿಗೊಳಿಸುವ ಕಾರ್ಯ ನಡೆಯುತ್ತದೆ.
ಪ್ಲಾಸ್ಟಿಕ್ , ರಟ್ಟು, ಪೈಬರ್ ಐಟಂ, ಕಬ್ಬಿಣ,ಹಾಳಾದ ಬಕೆಟ್, ಸೋಪು ಬಾಕ್ಸ್,ಪಾನ್ ಪರಾಗ್ ಪ್ಯಾಕೆಟ್,ಶಾಂಪೂ ಪ್ಯಾಕೆಟ್, ಪ್ಲಾಸ್ಟಿಕ್ ಗೋಣಿಚೀಲಗಳು ಹಾಗೂ ಇನ್ನಿತರ ಕಸಗಳನ್ನು ಬೇರೆ ಬೇರೆ ಮಾಡಿ ಶುಚಿಗೊಳಿಸಿ ಸಂಗ್ರಹಿಸಲಾಗುತ್ತದೆ.
ಇಂದು ಸಂಗ್ರಹಿಸಿದ ಪ್ಲಾಸ್ಟಿಕ್ ಕಸವನ್ನು ಲಾರಿಯ ಮೂಲಕ ಮಂಗಳೂರಿಗೆ ಕಳುಹಿಸಿಕೊಡಲಾಯಿತು.
ಪಂಚಾಯತ್ ವತಿಯಿಂದ ಘನತ್ಯಾಜ್ಯ ಘಟಕಕ್ಕೆ ಪಿಕಪ್ ವಾಹನವನ್ನು ಖರೀದಿಸಲಾಗಿದ್ದು ಐವರ್ನಾಡು ಪೇಟೆಯ ಮತ್ತು ಗ್ರಾಮದ ಇತರ ಕಡೆಯ ಕಸವನ್ನು ಸಂಗ್ರಹಿಸಲಾಗುತ್ತದೆ.
ಈ ಮೂಲಕ ಗ್ರಾಮದಲ್ಲಿ ಸ್ವಚ್ಛತೆಯನ್ನು ನಡೆಸಲಾಗುತ್ತದೆ.
ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು,ಗ್ರಾ.ಪಂ.ಸದಸ್ಯರು, ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು.ಡಿ
ಶೇಖರ್ ಹಾಗೂ ಪಂಚಾಯತ್ ನ ಸಿಬ್ಬಂದಿ ವರ್ಗದವರ ಸಂಪೂರ್ಣ ಸಹಕಾರದಿಂದ ಇದು ಸಾಧ್ಯವಾಗುತ್ತಿದೆ.
ಇಲ್ಲಿ ಪ್ರತೀ ತಿಂಗಳು ಸ್ವಚ್ಛತಾ ಆಂದೋಲನವನ್ನು ಕೂಡಾ ನಡೆಸಲಾಗುತ್ತಿದೆ.
ಉತ್ತಮವಾದ ಘನತ್ಯಾಜ್ಯ ಘಟಕವನ್ನು ಕೂಡಾ ಗ್ರಾಮದಲ್ಲಿ ನಿರ್ಮಿಸಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.