ಸೇವಾಜೆ : ಸೇತುವೆ ಕಾಮಗಾರಿ ವೀಕ್ಷಣೆ

Advt_Headding_Middle

ಆರಂತೋಡು ಮರ್ಕಂಜ ಎಲಿಮಲೆ ರಸ್ತೆಯ ಸೇವಾಜೆ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆ ಕಾಮಗಾರಿಯನ್ನು ಇಂದು ವೀಕ್ಷಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಇಂಜಿನಿಯರ್ , ಸೇತುವೆ ನಿರ್ಮಾಣದ ಕಾಂಟ್ರಾಕ್ಟರ್ , ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ,ಊರಿನವರಾದ ವಿಶ್ವೇಶ್ವರ ಉಪಾಧ್ಯಾಯ ಅಡಿಕೆಹಿತ್ಲು ಹಾಗೂ ಊರಿನವರು ಸ್ಥಳದಲ್ಲಿ ಉಪಸ್ಥಿತರಿದ್ದರು.

ಹಳೆಯ ಸೇತುವೆ ಸಂಪೂರ್ಣ ಕೆಡವಿ ಹೊಸ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ತಾತ್ಕಾಲಿಕ ಸಂಚಾರಕ್ಕಾಗಿ ಬದಲಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಅಕಾಲಿಕ ಮಳೆಯ ಕಾರಣ ಈ ರಸ್ತೆ ಕೆಸರಿನಿಂದ ಕೂಡಿತ್ತಲ್ಲದೇ ಹೊಳೆಯಲ್ಲಿ ನೀರಿನ‌ ಹರಿವು ಹೆಚ್ಚಾಗಿ ರಸ್ತೆಯ ಮೇಲೆ ನೀರು ಹರಿಯುತ್ತಿತ್ತು. ಅಪಾಯದ ಮುನ್ಸೂಚನೆ ಅರಿತು ಕೆಲವು ದಿನಗಳ ಹಿಂದೆ ಈ ರಸ್ತೆಯನ್ನೇ ಬಂದ್ ಮಾಡಲಾಗಿತ್ತು. ಇದೀಗ ಮಳೆ ಕೊಂಚ ಬಿಡುವು ನೀಡಿದೆ. “ಮಳೆ ಕಡಿಮೆಯಾದರೆ ಕೂಡಲೇ ಕಾಮಗಾರಿ ಆರಂಭಿಸುವ ಬಗ್ಗೆ ಕಾಂಟ್ರಾಕ್ಟರ್ ಒಪ್ಪಿಕೊಂಡಿದ್ದಾರೆಂದು ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.