ಸುಳ್ಯ : ಅಪಾರ್ಟ್ ಮೆಂಟ್ ನಲ್ಲಿ ಕಾಣಿಸಿಕೊಂಡ ಹೊಗೆ*

Advt_Headding_Middle

*
*ಮೇಲಿನ ಮಹಡಿಯವರ ಸಮಯ ಪ್ರಜ್ಞೆ ಯಿಂದ ತಪ್ಪಿದ ಭಾರೀ ಅನಾಹುತ*

 

ಸುಳ್ಯದ ರಾಮ ಹೋಟೆಲ್ ನ ಹಿಂಬದಿಯಲ್ಲಿರುವ ಅಪಾರ್ಟ್‌ಮೆಂಟ್ ನ ನೆಲ ಅಂತಸ್ತಿನಲ್ಲಿರುವ ಮನೆಯೊಳಗಿನಿಂದ ರಾತ್ರಿ ವೇಳೆಯಲ್ಲಿ ಭಾರೀ ಹೊಗೆ ಕಾಣಿಸಿಕೊಂಡಿದ್ದು, ಅದನ್ನು ಗಮನಿಸಿದ ಮೇಲಿನ ಮಹಡಿಯಲ್ಲಿ ವಾಸಿಸುತ್ತಿರುವ ಮನೆಯವರು ಕೂಡಲೇ ಅಗ್ನಿಶಾಮಕ ದಳದವರಿಗೆ ತಿಳಿಸಿದ ಕಾರಣ ಅವರು ಬಂದು ಹೊಗೆ ನಂದಿಸಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಸುಳ್ಯ ರಾಮ ಬಾರ್ ಹಿಂಬದಿಯ ದೇವಸ್ಯದ ಅಪಾರ್ಟ್‌ಮೆಂಟ್ ನಲ್ಲಿ ಆಯುರ್ವೇದಿಕ್ ವೈದ್ಯರೊಬ್ಬರು ಕ್ಲಿನಿಕ್ ನಡೆಸುತ್ತಿದ್ದು, ಮೇ.20 ರಂದು
ಅವರು ಕ್ಲಿನಿಕ್ ಬಂದ್ ಮಾಡಿ ಮನೆಗೆ ತೆರಳಿದ ಬಳಿಕ
ರಾತ್ರಿ ವೇಳೆ ಕ್ಲಿನಿಕ್ ನೊಳಗಿನಿಂದ ಬೆಂಕಿ ಹಿಡಿದ ರೀತಿಯಲ್ಲಿ ಹೊಗೆ ತುಂಬಿತು.

ಅದರ ಮಹಡಿಯಲ್ಲಿ ವಾಸವಾಗಿದ್ದ ನಂದರಾಜ್ ಸಂಕೇಶ ಅವರಿಗೆ ವಯರ್ ಸುಟ್ಟ ವಾಸನೆ ಬಂದ ಕಾರಣ ಅವರು ಕೆಳಗಡೆ ಗಮನಿಸಿದಾಗ ನೆಲಮಹಡಿಯಲ್ಲಿರುವ ಕ್ಲಿನಿಕ್ ಕೊಠಡಿಯ ಒಳಗಿನಿಂದ ಹೊಗೆ ಅವರಿಸಿದ್ದು ಕಂಡು ಬಂತು.

ಕೂಡಲೇ ಅವರು ಅಗ್ನಿಶಾಮಕ ದಳಕ್ಕೆ ತಿಳಿಸಿದರು. ಕೂಡಲೇ ಧಾವಿಸಿದ ಅಗ್ನಿಶಾಮಕ ದಳದವರು ಆವರಿಸಿದ್ದ ಹೊಗೆಯನ್ನು ತಿಳಿಗೊಳಿಸಿದರು.
ಕ್ಲಿನಿಕ್ ಒಳಗೆ ರೆಫ್ರಿಜರೇಟರ್ ಒಳಗಡೆ ಬೆಂಕಿ ಹೊತ್ತಿಕೊಂಡು ಹೊಗೆ ಆವರಿಸಿತೆನ್ನಲಾಗಿದೆ.

 


ಅದರ ಪಕ್ಕದಲ್ಲಿ ಮೂರು ಗ್ಯಾಸ್ ಸಿಲಿಂಡರ್ ಗಳಿದ್ದು ಅಗ್ನಿ ಶಾಮಕದವರ ತುರ್ತು ಕಾರ್ಯಾಚರಣೆಯಿಂದಾಗಿ
ಭಾರೀ ಅನಾಹುತ ವನ್ನು ತಪ್ಪಿಸಿದಂತಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.