ಟವರ್ ಇದ್ದರೂ; ನೆಟ್ವರ್ಕ್ ಇಲ್ಲಾ..

Advt_Headding_Middle

 

ದೇವಚಳ್ಳ ಗ್ರಾಮದ ಮಾವಿನಕಟ್ಟೆಯಲ್ಲಿ ‘ಬಿ.ಎಸ್.ಎನ್.ಎಲ್ ಟವರ್’ ಇದ್ದರೂ ನೆಟ್ವರ್ಕ್ ಸಿಗುತ್ತಿಲ್ಲ. ಮೊಬೈಲ್ ಆನ್ ಮಾಡಿದಾಗ ಕೇವಲ ‘4ಜಿ’ ಎಂದು ತೋರಿಸುತ್ತದೆ ಹೊರತು ಯಾವುದೇ ರೀತಿಯ ಸಂದೇಶಗಳು ಬರುವುದಿಲ್ಲ.

ಆನ್ ಲೈನ್ ತರಗತಿಗಳಿಗೆ ‘ಲಾಗ್ ಇನ್’ ಆಗಲೂ ತುಂಬ ಸಮಯವನ್ನು ತೆಗೆದುಕೊಂಡು ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ವಿದ್ಯುತ್ ಹೋದ ಕೂಡಲೇ ಯಾವುದೇ ನೆಟ್ವರ್ಕ್ ಸಿಗದೆ ಆಪತ್ತಿನಕಾಲದಲ್ಲಿ ಇದರ ಬಳಕೆಯಾಗದೆ ಜನರು ವಂಚಿತರಾಗುತ್ತಿದ್ದಾರೆ.
ಇನ್ನೂ ಕೆಲವು ಬಾರಿ ಬೆಳಗ್ಗೆ ನೆಟ್ವರ್ಕ್ ಇದ್ದರೆ ಮಧ್ಯಾಹ್ನ ಇರುವುದಿಲ್ಲ; ಮಧ್ಯಾಹ್ನದ ವೇಳೆ ಸಿಕ್ಕರೆ ಸಂಜೆ-ರಾತ್ರಿ ಇರುವುದಿಲ್ಲ. ಈ ರೀತಿಯಾದ ನೆಟ್ವರ್ಕ್ ಸಮಸ್ಯೆಯು ನಮ್ಮ ಊರಿನದ್ದು ಆಗಿದೆ.
‌‌‌‌‌ ‘ಕರಂಗಲ್ಲು’ ಎನ್ನುವ ಊರು ಅರಣ್ಯಗಳ ನಡುವೆ ಇದ್ದು ಇಲ್ಲಿ ಯಾವುದೇ ರೀತಿಯಾಗಿ ನೆಟ್ವರ್ಕ್ ಪೂರೈಸುತ್ತಿಲ್ಲ. ನೆಟ್ವರ್ಕ್ ಸಿಗದೆ ತರಗತಿಗೆ ಹೋಗಲು ಆಗದೆ ನೆಟ್ವರ್ಕ್ ಗಾಗಿ ಒಂದು ಊರಿನಿಂದ ಇನ್ನೊಂದು ಊರಿನ ಕಡೆಗೆ ನೆಟ್ವರ್ಕ್ ಹುಡುಕಿಕೊಂಡು ಹೋಗುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ನೆಟ್ವರ್ಕ್ ಎಷ್ಟು ನಿಧಾನವೆಂದರೆ, ವಾಟ್ಸಾಪ್ ಲ್ಲಿ ಕಳಿಸುವ ಸಂದೇಶ ಹೋಗಲು ಮೂರರಿಂದ ಐದು ನಿಮಿಷ ತೆಗೆದುಕೊಳ್ಳುತ್ತದೆ. ಒಂದು ಜಿ-ಮೇಲ್ ಸಂದೇಶ ರವಾನಿಸಲು ಮತ್ತು ಅದನ್ನು ತೆರೆಯಲು ಹತ್ತಕ್ಕಿಂತ ಜಾಸ್ತಿ ಸಮಯವನ್ನು ತೆಗೆದುಕೊಳ್ಳುತ್ತದೆ. ಆನ್ ಲೈನ್ ತರಗತಿಗಳಿಗೆ ಲಾಗ್ ಇನ್ ಆಗಲು ಹತ್ತು ನಿಮಿಷಗಳನ್ನು ತೆಗೆದುಕೊಂಡರು ಮಧ್ಯದಲ್ಲಿ ನಿಂತುಹೋಗುತ್ತದೆ. ಈ ರೀತಿಯ ಪರಿಸ್ಥಿತಿಯನ್ನು ವಿದ್ಯಾರ್ಥಿಗಳಾದ ನಾವು ಎದುರಿಸಬೇಕಾಗುತ್ತದೆ.
ಆಪತ್ತಿನ ಕಾಲದಲ್ಲಿ ಜನರಿಗೆ ನೆಟ್ವರ್ಕ್ ಲಭಿಸಬೇಕು; ಆನ್ ಲೈನ್ ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಾಗಲು ಈ ನೆಟ್ವರ್ಕ್ ಲಭಿಸಬೇಕು. ಕೇವಲ ಟವರ್ ಗಳಿದ್ದು ಏನೂ ಪ್ರಯೋಜನ ಇಲ್ಲದ ನೆಟ್ವರ್ಕ್ ನ್ನು ನಾವು ಕಾಣುತ್ತಿದ್ದೇವೆ.

-ಸಿಂಚನ.ಕೆ.ಯನ್
ದ್ವೀತಿಯ ಪದವಿ ವಿದ್ಯಾರ್ಥಿನಿ
ಕುತ್ಯಾಳ ಮನೆ,
ದೇವಚಳ್ಳ ಗ್ರಾಮ, ಸುಳ್ಯ ತಾಲೂಕು, ದ.ಕ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.