ಸುದ್ದಿ ಆನ್ಲೈನ್ ನ್ಯೂಸ್ ಫಲಶ್ರುತಿ

Advt_Headding_Middle

 

ಸುಳ್ಯ ಸರಕಾರಿ ಆಸ್ಪತ್ರೆಯೆದುರಿನ ಸಾರ್ವಜನಿಕ ಶೌಚಾಲಯ ಸಂಘಟನೆಗಳ ವತಿಯಿಂದ ಸ್ವಚ್ಛತೆ

ಸುಳ್ಯ ಸರಕಾರಿ ಆಸ್ಪತ್ರೆಯ ಮುಂಭಾಗದ ಸಾರ್ವಜನಿಕ ಶೌಚಾಲಯದ ಅವ್ಯವಸ್ಥೆಯ ಬಗ್ಗೆ ಮೇ. 21ರಂದು ಸುದ್ದಿ ಆನ್ಲೈನ್ ನ್ಯೂಸ್ ನಲ್ಲಿ ವರದಿ ಮಾಡಲಾಗಿತ್ತು.

ಈ ವರದಿಗೆ ಸ್ಪಂದನೆ ನೀಡಿದ ಹರೀಶ್ ಉಬರಡ್ಕ ಮತ್ತು ಜಯರಾಮ ದೇರಪ್ಪಜ್ಜನಮನೆಯವರು ಸುಳ್ಯ ನಗರ ಪಂಚಾಯತ್ ಸೇರಿದಂತೆ ಹಲವು ಸಂಘಟನೆಗಳವರನ್ನು ಸೇರಿಸಿಕೊಂಡು ಮೇ. 22ರಂದು ಶೌಚಾಲಯವನ್ನು ಮತ್ತು ಶೌಚಾಲಯದ ಪರಿಸರವನ್ನು ಸ್ವಚ್ಛಗೊಳಿಸಿದರು.

 


ಸುದ್ದಿ ಆನ್ಲೈನ್ ನ್ಯೂಸ್ ನಲ್ಲಿ ಶೌಚಾಲಯದ ಬಗ್ಗೆ ವರದಿ ಬಂದುದನ್ನು ಓದಿದ ಕೊಡಿಯಾಲಬೈಲಿನ ವಿಮುಕ್ತಿಧಾಮ ನಿರ್ಮಾಣ ಸಮಿತಿಯ ಹರೀಶ್ ಉಬರಡ್ಕ ಮತ್ತು ಜಯರಾಮ ದೇರಪ್ಪಜ್ಜನಮನೆಯವರು ಈ ಶೌಚಾಲಯದ ಸ್ವಚ್ಛತಾ ಕಾರ್ಯ ಮಾಡಲು ನಿರ್ಧರಿಸಿ ಸುಳ್ಯ ಸಿಟಿ ಜೇಸೀಸ್, ಸುಳ್ಯ ಲಯನ್ಸ್ ಕ್ಲಬ್ , ಆಟೋ ರಿಕ್ಷಾ ಚಾಲಕರ ಸಂಘ, ವಿಷ್ಣು ಯುವಕ ಮಂಡಲ ಕೊಡಿಯಾಲಬೈಲು ಮತ್ತು ಸುಳ್ಯ ನಗರ ಪಂಚಾಯತ್ ನವರನ್ನು ಸಂಪರ್ಕಿಸಿ , ಶೌಚಾಲಯ ಶುಚಿಗೊಳಿಸುವ ತಮ್ಮ ನಿರ್ಧಾರ ತಿಳಿಸಿ, ತಮ್ಮೊಂದಿಗೆ ಸೇರಿಕೊಳ್ಳುವಂತೆ ಇವರೆಲ್ಲರನ್ನು ಆಹ್ವಾನಿಸಿದರು.

ಅದಕ್ಕೆ ಅವರೆಲ್ಲರೂ ಒಪ್ಪಿದರು. ಅದರಂತೆ ಮೇ.22 ರಂದು ಬೆಳಿಗ್ಗೆ ನಡೆದ ಸ್ವಚ್ಛತಾ ಶ್ರಮದಾನದಲ್ಲಿ ಅವರೆಲ್ಲ ಭಾಗವಹಿಸಿದರು.
ನ ಪಂ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ , ಹರೀಶ್ ಉಬರಡ್ಕ ಮತ್ತಿತರರು ಸ್ವತಹ ಹಿಡಿಸೂಡಿ ಹಿಡಿದು ಶೌಚಾಲಯ ಶುಚಿಗೊಳಿಸಿದ್ದು ಗಮನ ಸೆಳೆಯಿತು.
ಲಯನ್ ಜಯರಾಮ ದೇರಪ್ಪಜ್ಜನಮನೆ, ಆನಂದ ಪೂಜಾರಿ ಆನಂದ ಎಲೆಕ್ಟ್ರಿಕಲ್ಸ್, ನಾರಾಯಣ ಅನ್ನಪೂರ್ಣ ಎಲೆಕ್ಟ್ರಿಕಲ್ಸ್, ಜೇಸಿ ಅಧ್ಯಕ್ಷ ಚಂದ್ರಶೇಖರ ಕನಕಮಜಲು, ಮನಮೋಹನ ಬಳ್ಳಡ್ಕ , ಅಶೋಕ್ ಅಡ್ಕಾರ್, ರಂಜಿತ್ ಪಿ ಜೆ, ನಾಗರಾಜ್, ಲೋಕೇಶ್ ಊರುಬೈಲು, ವಿಷ್ಣು ಯುವಕ ಮಂಡಲ ಕೊಡಿಯಾಲಬೈಲು ಪದಾಧಿಕಾರಿ ಪ್ರಭಾಕರ ಅಮೈ, ಸೀತಾನಂದ ಬೇರ್ಪಡ್ಕ, ಗಣೇಶ್ ಕಮಿಲಡ್ಕ, ಆಟೋ ಚಾಲಕರ ಸಂಘದ ವಿಜಯ ಕುಮಾರ್ ಉಬರಡ್ಕ, ವಿಮುಕ್ತಿ ರುದ್ರಭೂಮಿ ಸಹಾಯಕ ಗುರುವ, ನಪಂ ಸಿಬ್ಬಂದಿಗಳು ಸ್ವಚ್ಛತೆಯಲ್ಲಿ ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.