ಕುಂಭಕೋಡು ಬರೆ ಕುಸಿತ ಗೊಂಡಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಕಾರ್ಯ -ಲೈನ್ ಮೇಲೆ ಬೀಳುವ ಹಂತದಲ್ಲಿದೆ ಸಾಲು ತೆಂಗಿನ ಮರಗಳು

Advt_Headding_Middle

 

ನಾರ್ಕೋಡು- ಕೋಲ್ಚಾರು ರಸ್ತೆ ಮಧ್ಯೆ ಕುಂಭಕೋಡು ಎಂಬಲ್ಲಿ ಕಳೆದ ವಾರ ಸುರಿದ ಮಳೆಯ ಪರಿಣಾಮ ಬರೆಕುಸಿತಗೊಂಡಿರುವುದರಿಂದ ಮೇಲ್ಭಾಗದಲ್ಲಿರುವ ಮನೆಗಳು ಅಪಾಯದ ಅಂಚಿನಲ್ಲಿವೆ. ಲೋಕೋಪಯೋಗಿ ಇಲಾಖೆಯ ರಸ್ತೆ ಇದಾಗಿದ್ದು ರಸ್ತೆಯ ಅಭಿವೃದ್ಧಿ ಕಾರ್ಯ ನಡೆಯುತ್ತಿರುವ ಸಂದರ್ಭ ರಸ್ತೆ ಅಗಲೀಕರಣ ಮಾಡಲಾಗಿತ್ತು. ಇದರಿಂದ ಕೆಲವು ಕಡೆಗಳಲ್ಲಿ ಬರೆ ನಿರ್ಮಾಣವಾಗಿತ್ತು. ಕುಂಭಕೋಡುವಿನಲ್ಲಿರುವ 5 ಮನೆಗಳ ತಳಭಾಗದಲ್ಲಿ ಬರೆ ಇದ್ದು ಇದೀಗ ಕಳೆದ ವಾರ ಸುರಿದ ಮಳೆಯಿಂದ ಕುಸಿಯಲಾರಂಭಿಸಿದೆ. ಈ ಕುರಿತು ಪಂಚಾಯತ್ ಸದಸ್ಯ ಧರ್ಮಪಾಲ ಕೊಯಿಂಗಾಜೆ ಯವರು ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ರವರಿಗೆ ವಿಷಯ ತಿಳಿಸಿದರು. ತಕ್ಷಣ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪರಿಶೀಲಿಸಿ ತಾತ್ಕಾಲಿಕ ತಡೆಗೋಡೆ ನಿರ್ಮಿಸುವ ಭರವಸೆ ನೀಡಿದರು. ಇದೀಗ ಕುಸಿತಗೊಂಡಿರುವ ರಸ್ತೆ ಬದಿ ಪ್ಲಾಸ್ಟಿಕ್ ಗೋಣಿಚೀಲಕ್ಕೆ ಮಣ್ಣು ತುಂಬಿಸಿ ತಡೆಗೋಡೆ ನಿರ್ಮಾಣದ ಕಾರ್ಯ ಭರದಿಂದ ನಡೆಯುತ್ತಿದೆ.
ಬರೆ ಕುಸಿತಗೊಂಡಿರುವ ಮನೆಯ ಅಂಗಳದ ಮುಂಭಾಗದಲ್ಲಿ ಸಾಲು ತೆಂಗಿನ ಮರಗಳು ಇದ್ದು ಅದೆಲ್ಲವೂ ರಸ್ತೆಗೆ ಬಾಗಿಕೊಂಡಿವೆ. ಒಂದು ವೇಳೆ ತೆಂಗಿನ ಮರ ಬಿದ್ದರೆ ರಸ್ತೆ ಬದಿಯಲ್ಲಿರುವ ವಿದ್ಯುತ್ ಲೈನ್ ಮೇಲೆ ಬೀಳುವ ಸಾಧ್ಯತೆ ಇದೆ. ಇದರಿಂದ ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕ ಅಸ್ತವ್ಯಸ್ತವಾಗಬಹುದು. ಆದ್ದರಿಂದ ಸಂಬಂಧ ಪಟ್ಟ ಇಲಾಖೆ ಇದರ ಬಗ್ಗೆ ಗಮನಹರಿಸಿ ಮುಂಜಾಗೃತ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.